ಕವಿತೆಗಳು

ಕಾಡದಿರು ಕನ್ಯೆ… ಕಳೆದೋಗಿರುವೆನು!

ನಿನ್ನನು ಒಮ್ಮೊಮ್ಮೆ
ಅರ್ಥಮಾಡಿಕೊಳ್ಳುವುದೆ ಕಷ್ಟ
ಏಕೋ ಗೊತ್ತಿಲ್ಲ ನೀನಂದರೆ
ನನಗೆ ಬಹಳ ಇಷ್ಟ…

ಭಾವನೆಗಳ ಅಭಿವ್ಯಕ್ತಿ
ಪಡಿಸುವ ರೀತಿಯೇ ಅಂದ
ನನ್ನನು ಪೆದ್ದು ಪೆದ್ದಾಗಿ
ದೂಷಿಸುವ ಪರಿಯೇ ಚೆಂದ…

ನಗಬೇಕೋ ಬೇಸರಿಸಿಕೊಳ್ಳಬೇಕೋ
ತಿಳಿಯದೆ ಕೂತಿರುವೆ ಸುಮ್ಮನೆ
ಮುದ್ದಾದ ಪ್ರೀತಿಯು ಸಿಗುತಿರುವಾಗ
ಮೂಕವಿಸ್ಮಿತನಾಗಿ ತಲೆಯಾಡಿಸುತಿರುವೆ ಮೆಲ್ಲನೆ…

ಹೆಚ್ಚು ಹೆಚ್ಚು ಕಾಡದಿರು ನನಗೆ
ತಿಳಿದಿಲ್ಲ ಸಮಾಧಾನಪಡಿಸುವ ರೀತಿ
ನಿಯಂತ್ರಣಕೆ ಸಿಗದೆ ಹೋದರೆ
ಅಪ್ಪಿಕೊಂಡು ತಿಳಿಗೊಳಿಸುವೆ ಪರಿಸ್ಥಿತಿ.

ಶರಣಬಸವ ಪಾಟೀಲ್, ಇಲಕಲ್

About the author

ಕನ್ನಡ ಟುಡೆ

Leave a Comment