ಕ್ರೀಡೆ

ಕಾಮನ್ವೆಲ್ತ್ ಕ್ರೀಡಾಕೂಟ : ಭಾರತದ ಪರ ಮೊದಲ ಪದಕ ಗೆದ್ದ ಕನ್ನಡಿಗ ಗುರುರಾಜ್

ಆಸ್ಟ್ರೇಲಿಯಾದ ಗೋಲ್ಡ್ಕೋಸ್ಟ್ನಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ಕ್ರೀಡಾಕೂಟದಲ್ಲಿ ಕನ್ನಡಿಗಕುಂದಾಪುರದ ಗುರುರಾಜ್ಪೂಜಾರಿ ವೇಟ್ಲಿಫ್ಟಿಂಗ್ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಜಯಿಸಿದ್ದಾರೆ. ಇದರೊಂದಿಗೆ ಭಾರತದ ಪರ ಅವರು ಮೊದಲ ಪದಕ ಗೆದ್ದಂತಾಗಿದೆ.  ಇಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ಕ್ರೀಡಾಕೂಟದಲ್ಲಿ ಕನ್ನಡಿಗ  ಗುರುರಾಜ್‌ ಪೂಜಾರಿ ವೇಟ್ಲಿಫ್ಟಿಂಗ್ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಜಯಿಸಿದ್ದಾರೆ. ಇದರೊಂದಿಗೆ ಭಾರತದ ಪರ ಅವರು ಮೊದಲ ಪದಕ ಗೆದ್ದಂತಾಗಿದೆ.

ಪುರುಷರ ವಿಭಾಗದ 56 ಕೆ.ಜಿ. ವೇಟ್ಲಿಫ್ಟಿಂಗ್ನಲ್ಲಿ ಗುರುರಾಜ್ ಒಟ್ಟು 249 ಕೆ.ಜಿ. ಭಾರ ಎತ್ತುವ ಮೂಲಕ ಸಾಧನೆ ಮಾಡಿದ್ದಾರೆ. ಮೊದಲಿಗೆ 111 ಕೆ.ಜಿ. ಭಾರ ಎತ್ತಿದ ಅವರು ನಂತರ 138 ಕೆ.ಜಿ. ಭಾರ ಎತ್ತಿದ್ದಾರೆ.

ಮಲೇಷ್ಯಾದ ಇಜಾರ್ ಅಹ್ಮದ್ ಒಟ್ಟು 261 ಕೆ.ಜಿ. ಭಾರ ಎತ್ತುವ ಮೂಲಕ ಚಿನ್ನದ ಪದಕ ಜಯಿಸಿದರೆ, ಶ್ರೀಲಂಕಾದ ಚತುರಂಗ ಲಕ್ಮಲ್ ಕಂಚಿನ ಪದಕ ಗೆದ್ದಿದ್ದಾರೆ.

ಗುರುರಾಜ್ ಕುಂದಾಪುರ ತಾಲ್ಲೂಕಿನ ಚಿತ್ತೂರು ಸಮೀಪದ ಜೆಡ್ಡು ಗ್ರಾಮದವರು. ಆಟೋ ರಿಕ್ಷಾ ಚಾಲಕ ಮಹಾಬಲ ಪೂಜಾರಿ ಮತ್ತು ಪದ್ದು ದಂಪತಿಯ ಆರು ಮಕ್ಕಳಲ್ಲಿ ಗುರು ಒಬ್ಬರು. ಆರಂಭಿಕ ದಿನಗಳಲ್ಲಿ ಕುಸ್ತಿ, ಪೋಲ್ವಾಲ್ಟ್ನಲ್ಲಿ ಆಸಕ್ತಿ ಬೆಳೆಸಿಕೊಡಿದ್ದ ಇವರು ನಂತರ ವೇಟ್ಲಿಫ್ಟಿಂಗ್ನಲ್ಲಿ ಸಾಧನೆ ಮಾಡಿದ್ದಾರೆ.

 

 

About the author

Pradeep Kumar T R

Leave a Comment