ಸಿನಿ ಸಮಾಚಾರ

ಕಾಮಿಡಿ ಕಿಲಾಡಿ ನಯನಾ ದಾಂಪತ್ಯ ಜೀವನಕ್ಕೆ ಶರತ್ ಜೊತೆ ಸಪ್ತಪದಿ

ಬೆಂಗಳೂರು: ಜೀ ಟಿವಿಯ ಕಾಮಿಡಿ ಕಿಲಾಡಿ ಶೋ ಮೂಲಕ ಜನಪ್ರಿಯಗೊಂಡಿದ್ದ ಕಾಮಿಡಿ ಕಿಲಾಡಿ ನಯನಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.  ದೂರದ ಸಂಬಂಧಿ ಶರತ್ ಎಂಬುವರ ಜತೆ ನಯನಾ ಧರ್ಮಸ್ಥಳದ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ಕುಟುಂಬ ಸದಸ್ಯರು ಮತ್ತು ಆಪ್ತರ ಸಮ್ಮುಖದಲ್ಲಿ ಸಪ್ತಪದಿ ತುಳಿದರು.

ಕಾಮಿಡಿ ಕಿಲಾಡಿಗಳು ಶೋನಲ್ಲಿ ನಯನಾ ರನ್ನರ್ ಅಪ್ ಆಗಿದ್ದರು. ನಯನಾ ಪತಿ ಶರತ್ ಮೂಲತಃ ಬೆಂಗಳೂರಿನ ಉದ್ಯಮಿಯಾಗಿದ್ದಾರೆ.  ಮದುವೆ ಕಾರ್ಯಕ್ರಮದಲ್ಲಿ ಕಾಮಿಡಿ ಕಿಲಾಡಿಗಳ ವಿನ್ನರ್ ಮತ್ತು ನಟ ಶಿವರಾಜ್ ಕೂಡಾ ಭಾಗವಹಿಸಿ ನವ ದಂಪತಿಗಳಿಗೆ ಶುಭಾಶಯ ಕೋರಿದರು. ಇನ್ನು ಮದುವೆಯ ಆರತಕ್ಷತೆ ಕಾರ್ಯಕ್ರಮ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನಡೆಯಿತು.

 

About the author

ಕನ್ನಡ ಟುಡೆ

Leave a Comment