ದೇಶ ವಿದೇಶ

ಕಾಯಂ ಸದಸ್ಯತ್ವ: ಭಾರತಕ್ಕೆ ನಾರ್ಡಿಕ್ ರಾಷ್ಟ್ರಗಳ ಬೆಂಬಲ

ವಿಶ್ವ ಸಂಸ್ಥೆ ಭದ್ರತಾ ಮಂಡಳಿಯಲ್ಲಿ ಕಾಯಂ ಸದಸ್ಯತ್ವದ ಅಪೇಕ್ಷೆ ಹೊಂದಿರುವ ಭಾರತಕ್ಕೆ ನಾರ್ಡಿಕ್ ರಾಷ್ಟ್ರಗಳು ಬೆಂಬಲ ಸೂಚಿಸಿವೆ. ಭಾರತವನ್ನು ಒಂದು ‘ಬಲಿಷ್ಟಅಭ್ಯರ್ಥಿ’ ಎಂದು ಇದೇ ವೇಳೆ ವಿಶ್ಲೇಷಿಸಿವೆ. – ಪ್ರಧಾನಿ ನರೇಂದ್ರಮೋದಿ ಅವರೊಂದಿಗೆ ಐದು ನಾರ್ಡಿಕ್ (ಉತ್ತರ ಯೂರೋಪ್ ಹಾಗು ಅಟ್ಲಾಂಟಿಕ್ ಪ್ರದೇಶ ಸೇರಿದ) ರಾಷ್ಟ್ರಗಳಾದ ಸ್ವೀಡನ್, ಡೆನ್ಮಾರ್ಕ್, ಐಸ್‌ಲ್ಯಾಂಡ್, ನಾರ್ವೆ ಮತ್ತು ಫಿನ್‌ಲ್ಯಾಂಡ್‌ನ  ಮುಖಂಡರು ಜಂಟಿಯಾಗಿ ಮಂಗಳವಾರ ರಾತ್ರಿ ಪತ್ರಿಕಾಗೋಷ್ಠಿ ನಡೆಸಿ, ವಿಶ್ವಸಂಸ್ಥೆ ಭದ್ರತಾಮಂಡಳಿಯಲ್ಲಿ ಭಾರತದ ಕಾಯಂ ಸದಸ್ಯತ್ವಕ್ಕೆ ಬೆಂಬಲ ಸೂಚಿಸಿದರು. ಜತೆಗೆ ಇದು ವಿಶ್ವಸಂಸ್ಥೆ ಕೈಗೊಳ್ಳಬಯಸುವ ಸುಧಾರಣಾ ಪ್ರಯತ್ನಗಳಿಗೆ ಹಾಗೂ 21ನೇಶತಮಾನದ ವಾಸ್ತವತೆಗಳಿಗೆ ಹೆಚ್ಚು ಜವಾಬ್ದಾರಿ ಮತ್ತು ಪರಿಣಾಮಕಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು. ”ವಿಶ್ವ ಸಂಸ್ಥೆ ಭದ್ರತಾ ಮಂಡಳಿಯಲ್ಲಿ ಕಾಯಂ ಸ್ಥಾನ ಹೊಂದಲು ಭಾರತ ಒಂದು ಬಲಿಷ್ಠ ಅಭ್ಯರ್ಥಿ ಎಂದು ನಾರ್ಡಿಕ್ ರಾಷ್ಟ್ರಗಳ ಪೂರ್ಣ ಪ್ರಮಾಣದಲ್ಲಿ ಒಪ್ಪಿಕೊಳ್ಳುತ್ತವೆ,” ಎಂದು ಜಂಟಿ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು. ಇದಕ್ಕೂ ಮೊದಲು ನಡೆದ ‘ಭಾರತ- ನಾರ್ಡಿಕ್ ಶೃಂಗ ಸಭೆ ‘ಯಲ್ಲಿ ಮೋದಿ ಅವರೊಂದಿಗೆ ಸ್ವೀಡನ್, ಡೆನ್ಮಾರ್ಕ್, ಐಸ್‌ಲ್ಯಾಂಡ್, ನಾರ್ವೆ – ಮತ್ತು ಫಿನ್ಲ್ಯಾಂಡ್ ಮುಖ್ಯಸ್ಥರು ಭಾಗಿಯಾಗಿ ಮಾತುಕತೆ ನಡೆಸಿದರು.

About the author

ಕನ್ನಡ ಟುಡೆ

Leave a Comment