ಸುದ್ದಿ

ಕಾರಿನಲ್ಲಿ ಸಾಮೂಹಿಕ ಅತ್ಯಾಚಾರ ಎಸೆದ ಕಾಮುಕರು        

ಗ್ರೇಟರ್​ ನೊಯಿಡಾ: ಡ್ರಾಪ್​ ಕೊಡುವುದಾಗಿ ಹೇಳಿ 11ನೇ ತರಗತಿಯ ಯುವತಿಯನ್ನು ಕರೆದೊಯ್ದ ಸಹಪಾಠಿಯೊಬ್ಬ ಸ್ನೇಹಿತರೊಂದಿಗೆ ಸೇರಿ ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ತಡವಾಗಿ ಹೊರ ಬಿದ್ದಿದ್ದು ಇಬ್ಬರನ್ನು ಈಗಾಗಲೇ ಬಂಧಿಸಲಾಗಿದೆ. ನನ್ನ ಶಾಲಾ ಬಸ್​ ಮಿಸ್​ ಆದ್ದರಿಂದ ಮನೆಗೆ ಒಬ್ಬಳೇ ನಡೆದುಕೊಂಡು ಹೋಗುತ್ತಿದ್ದಾಗ ನನ್ನ ಸಹಪಾಠಿ ಹಾಗೂ ಅವನ ಸ್ನೇಹಿತ ಕಾರಿನಲ್ಲಿ ಬಂದು ನನ್ನನ್ನು ಮನೆಗೆ ಡ್ರಾಪ್​ ಮಾಡುವುದಾಗಿ ಹೇಳಿದರು. ಕಾರ್​ ಹತ್ತಿದ ಮೇಲೆ ನನಗೆ ಬಲವಂತವಾಗಿ ಮದ್ಯ ಕುಡಿಸಿ, ಡ್ರಗ್ಸ್​ ನೀಡಿ ಕಾರಿನಲ್ಲೇ ಸಾಮೂಹಿಕ ಅತ್ಯಾಚಾರ ನಡೆಸಿ ರಸ್ತೆ ಬದಿಯಲ್ಲಿ ಎಸೆದು ಹೋದರು ಎಂದು ಪೊಲೀಸರಿಗೆ ದೂರು ನೀಡಿದ್ದಳು. ದೂರಿನ ಆಧಾರದ ಮೇಲೆ ತನಿಖೆ ನಡೆಸಿ ಪ್ರಕರಣದ ಪ್ರಮುಖ ಆರೋಪಿ ಹಾಗೂ ಒಬ್ಬ ಯುವಕನನ್ನು ಬಂಧಿಸಿದ್ದೇವೆ. ಮತ್ತೊಬ್ಬನ ಹುಡುಕಾಟದಲ್ಲಿದ್ದೇವೆ ಎಂದು ಹಿರಿಯ ಪೊಲೀಸ್​ ಅಧಿಕಾರಿ ಅವ್​ನೀಶ್​ ಕುಮಾರ್​ ತಿಳಿಸಿದ್ದಾರೆ. ​

 

About the author

ಕನ್ನಡ ಟುಡೆ

Leave a Comment