ಸುದ್ದಿ

ಕಾರು,ಬೈಕ್ ಡಿಕ್ಕಿ: ಮಗು ಸಹಿತ ಮೂವರ ಮೃತ್ಯು

ದೊಡ್ಡಬಳ್ಳಾಪುರ: ತುಮಕೂರು-ದೊಡ್ಡಬಳ್ಳಾಪುರ ಮುಖ್ಯರಸ್ತೆಯ ಕೂಗಾನಹಳ್ಳಿ ಗೇಟ್‌ನಲ್ಲಿ ಇಂಡಿಕಾ ಕಾರು ಮತ್ತು ಬೈಕ್ ಮುಖಾಮುಖಿ ಡಿಕ್ಕಿ ಹೊಡೆದು ಬೈಕ್‌ನಲ್ಲಿ ಇದ್ದ ಅಜ್ಜಿ ತಾತ ಸೇರಿದಂತೆ 3 ವರ್ಷದ ಮೊಮ್ಮಗ ಕುಟುಂಬದ ಸ್ಥಳದಲ್ಲೇ ಸಾವನ್ನಪ್ಪಿದೆ.

ಮೃತರನ್ನು ತ್ಯಾಮಗೊಂಡಲಿನ ಸಯದ್ ಅಬ್ದುಲ್ (48), ಜಬೀನಾ ತಾಜ್ (42), ಮೊಮ್ಮಗ ಫಿಜಾನ್ ತಾಜ್(3) ಗುರುತಿಸಲಾಗಿದೆ. ಈ ಕುರಿತು ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರಾದ ಸಯದ್ ಅಬ್ದುಲ್ ಜಬೀನಾ ತಾಜ್ ದಂಪತಿಗಳು ಗೌರಿಬಿದನೂರಿನ ತನ್ನ ಮಗಳ ಮನೆಯಿಂದ ಮೊಮ್ಮಗನನ್ನು ತ್ಯಾಮಗೊಂಡಲಿಗೆ ಬೈಕಿನಲ್ಲಿ ಕರೆದು ಕೊಂಡು ಹೋಗುವಾಗ ಘಟನೆ ನಡೆದಿದೆ.

ತ್ಯಾಮಗೊಂಡಲು ಕಡೆಯಿಂದ ಬರುತ್ತಿದ್ದ ಇಂಡಿಕಾ ಕಾರಿಗೆ ತ್ಯಾಮಗೊಂಡಲು ಕಡೆಗೆ ಬೈಕ್ ಹೋಗುತ್ತಿದ್ದಾಗ ಮುಖಾ ಮಖಿ ಡಿಕ್ಕಿಯಾದ ಪರಿಣಾಮ ಬೈಕಿನಲ್ಲಿದ್ದ 3 ವರ್ಷದ ಮಗು ಸೇರಿದಂತೆ ಮೂರು ಮಂದಿ ಮೃತ ಪಟ್ಟಿದ್ದಾರೆ. ಕಾರು ಚಾಲಕ ಅಂಜನಕುಮಾರ್ ತಲೆ ಭಾಗಕ್ಕೆ ತೀವ್ರ ಗಾಯವಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಹೇಳಲಾಗಿದೆ.

About the author

ಕನ್ನಡ ಟುಡೆ

Leave a Comment