ಸಿನಿ ಸಮಾಚಾರ

ಕಾಲಿವುಡ್​ ನಟಿ ರಿಯಾಮಿಕಾ ನೇಣಿಗೆ ಶರಣು, ಪೊಲೀಸ್ ತನಿಖೆ ಆರಂಭ

ಚೆನ್ನೈ: ಕಾಲಿವುಡ್ ನ ಉದಯೋನ್ಮುಖ ನಟಿ ರಿಯಾಮಿಕಾ(26 ವರ್ಷ) ನೇಣಿಗೆ ಶರಣಾಗಿರುವ ಘಟನೆ ಶುಕ್ರವಾರ ನಡೆದಿದೆ. ಚೆನ್ನೈನ ವಲಸರವಕ್ಕಮ್​ ಪ್ರದೇಶದಲ್ಲಿರುವ ಅವರ ನಿವಾಸದಲ್ಲಿ ನಟಿ ರಿಯಾಮಿಕಾ ನೇಣಿಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದು, ಆತ್ಮಹತ್ಯೆಗೆ ಕಾರಣವೇನೆಂಬುದು ತಿಳಿದುಬಂದಿದೆ. ರಿಯಾಮಿಕಾ ತನ್ನ ಸಹೋದರ ಪ್ರಕಾಶ್ ​ರೊಂದಿಗೆ ವಲಸರವಕ್ಕಮ್​ನ ಶ್ರೀದೇವಿ ಕುಪ್ಪಂ ಪ್ರದೇಶದಲ್ಲಿ ಬಾಡಿಗೆ ಮನೆಯೊಂದರಲ್ಲಿ ಕಳೆದ ನಾಲ್ಕು ತಿಂಗಳಿನಿಂದ ವಾಸವಿದ್ದರು. ರಾತ್ರಿ ತಡವಾಗಿ ಮನೆಗೆ ಬಂದಳು. ನಾನವಳನ್ನು ಕೊನೆಯ ಬಾರಿಗೆ ಜೀವಂತವಾಗಿ ನೋಡಿದ್ದು ಅಂದೇ, ಅಂದು ಅವಳು ತುಂಬಾ ದಣಿದಿದ್ದ ಸ್ಥಿತಿಯಲ್ಲಿದ್ದಳು ಎಂದು ಸಹೋದರ ಪ್ರಕಾಶ್​ ತಿಳಿಸಿದ್ದಾರೆ. ಮಂಗಳವಾರ ತಡರಾತ್ರಿ ರಿಯಾಮಿಕಾ ಅವರು ತಮ್ಮ ಸ್ನೇಹಿತ ದಿನೇಶನಿಗೆ ಸಾಕಷ್ಟು ಬಾರಿ ಕರೆ ಮಾಡಿದ್ದಾಳೆ. ಆದರೆ, ಕರೆ ಸ್ವೀಕರಿಸಿದ ದಿನೇಶ್ ಮರುದಿನ ಬೆಳಗ್ಗೆ ರಿಯಾಮಿಕಾಳಿಗೆ​ ವಾಪಸ್​ ಕರೆ ಮಾಡಿದಾಗ ನಾಟ್​ ರೀಚಬಲ್​ ಆಗಿದೆ. ತಕ್ಷಣ ಮನೆಗೆ ಹೋಗಿ ಪ್ರಕಾಶ್​ ಬಳಿ ಕೇಳಿದ್ದಾನೆ. ಪ್ರಕಾಶ್​ ಹಾಗೂ ದಿನೇಶ್​ ಆಕೆಯ ಕೋಣೆಯ ಬಳಿ ಹೋದಾಗ ಲಾಕ್​ ಆಗಿದ್ದನ್ನು ಕಂಡು ಸಾಕಷ್ಟು ಬಾರಿ ಬಾಗಿಲು ಬಡಿದಿದ್ದಾರೆ. ಆದರೆ, ತೆಗೆಯದಿದ್ದಾಗ ಪ್ರಕಾಶ್​ ಕಿಟಕಿಯನ್ನು ಒಡೆದು ನೋಡಲು ರಿಯಾಮಿಕಾ ನೇಣಿಗೆ ಶರಣಾಗಿರುವುದು ಕಂಡುಬಂದಿದೆ. ತಕ್ಷಣ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮೃತ ದೇಹವನ್ನು ವಶಕ್ಕೆ ಪಡೆದಿದ್ದಾರೆ.
ಇನ್ನು ರಿಯಾಮಿಕಾ ತಮಿಳು ಚಿತ್ರರಂಗದ ಉದಯೋನ್ಮುಖ ನಟಿಯಾಗಿದ್ದು, ಕುಂಡ್ರತೈಲ್ ಕುಮಾರನುಕು ಕೊಂಡಾಟ್ಟಮ್ ಮತ್ತು ಅಘೋರಿ-ಯಿನ್ ಅಟ್ಟಮ್ ಆರಂಬಂ ಚಿತ್ರಗಳಲ್ಲಿ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕೆಲವು ಚಿತ್ರಗಳಲ್ಲಿ ತೊಡಗಿಕೊಂಡಿದ್ದ ರಿಯಾಮಿಕಾ ಅವರಿಗೆ ಕಾಲಿವುಡ್ ನಲ್ಲಿ ಹೆಚ್ಚು ಅವಕಾಶ ಬರುತ್ತಿತ್ತಂತೆ. ಹೆಚ್ಚು ಚಿತ್ರದಲ್ಲಿ ಭಾಗಿಯಾಗದೇ ಒತ್ತಡಕ್ಕೆ ಒಳಗಾಗಿದ್ದರು. ಇದೇ ಅವಳ ಸಾವಿಗೆ ಕಾರಣ ಇರಬಹುದು ಎಂದು ಕುಟುಂಬದವರು ಅನುಮಾನ ವ್ಯಕ್ತಪಡಿಸಿದ್ದಾರೆ.

About the author

ಕನ್ನಡ ಟುಡೆ

Leave a Comment