ರಾಷ್ಟ್ರ

ಕಾಲುವೆಗೆ ಉರುಳಿಬಿದ್ದ ಟ್ರ್ಯಾಕ್ಟರ್‌, 9 ಮಂದಿ ಜಲಸಮಾಧಿ

ನಲ್ಗೊಂಡ: ಟ್ರ್ಯಾಕ್ಟರ್‌‌ವೊಂದು ಕಾಲುವಿಗೆ ಉರುಳಿ ಬಿದ್ದು 9 ಮಂದಿ ಕೂಲಿ ಕಾರ್ಮಿಕ ಮಹಿಳೆಯರು ಜಲಸಮಾಧಿಯಾಗಿರುವ ಘಟನೆ ತೆಲಂಗಾಣದ ನಲ್ಗೊಂಡ ಜಿಲ್ಲೆಯ ವಾಡಿಪಟ್ಲಾ ಗ್ರಾಮದ ಬಳಿ ಸಂಭವಿಸಿದೆ.

30 ಕೂಲಿಕಾರ ಮಹಿಳೆಯರನ್ನು ಕರೆದೊಯ್ಯುತ್ತಿದ್ದ ವೇಳೆ ಟ್ರ್ಯಾಕ್ಟರ್‌‌ ಎಎಂಆರ್‌ಪಿ (ಅಲಿಮಿನೆತಿ ಮಾಧವ ರೆಡ್ಡಿ ಯೋಜನೆ) ಕಾಲುವಿಗೆ ಉರುಳಿ ಬಿದ್ದಿದ್ದು, 9 ಮಂದಿ ಜಲಸಮಾಧಿಯಾಗಿದ್ದಾರೆ. ಇವರೆಲ್ಲರೂ ಪಾದಮಾಟಿ ಗ್ರಾಮದವರಾಗಿದ್ದು, ಪೆದ್ದವೂರ ಮಂಡಲ್‌ಗೆ ಕೂಲಿಗಾಗಿ ಬರುತ್ತಿದ್ದರು ಎಂದು ತಿಳಿದುಬಂದಿದೆ. ಮೃತರನ್ನು ರಾಮವತ್‌ ಸೋನಾ(70), ರಾಮಾವತ್‌ ಜೆಲಾ(65), ಜರುಕುಲ ದ್ವಾಲಿ(30), ರಾಮಾವತ್‌ ಕೇಲಿ(50), ಬಾನಾವತ್ ಬೆರಿ(55), ರಾಮಾವತ್‌ ಭಾರತಿ(35) ಮತ್ತು ರಾಮಾವತ್‌ ಸುನೀತಾ(30) ಎಂದು ಗುರುತಿಸಲಾಗಿದೆ.

ಸ್ಥಳಕ್ಕೆ ಸ್ಥಳೀಯ ನಿವಾಸಿಗಳು, ಪೊಲೀಸರು ಆಗಮಿಸಿ ರಕ್ಷಣಾ ಕಾರ್ಯ ಕೈಗೊಂಡು, ಮೃತರೆಲ್ಲರನ್ನು ನೀರಿನಿಂದ ಹೊರತೆಗೆಯಲಾಗಿದೆ.

About the author

ಕನ್ನಡ ಟುಡೆ

Leave a Comment