ಕ್ರೈಂ

ಕಾಲೇಜಿನಲ್ಲಿ ಅಧ್ಯಾಪಕನ ಮೇಲೆ ಗುಂಡಿನ ದಾಳಿ ನಡೆಸಿದ ವಿದ್ಯಾರ್ಥಿ

ಹರಿಯಾಣ: ಹರಿಯಾಣದ ಸೋನಿಪತ್ ಕಾಲೇಜಿನಲ್ಲಿ ಭಯಾನಕರ ಘಟನೆ ನಡೆದಿದೆ.ವಿದ್ಯಾರ್ಥಿಯೊಬ್ಬ        ಶಿಕ್ಷಕನ ಮೇಲೆ ಗುಂಡು ಹಾರಿಸಿದ್ದಾನೆ ಆರೋಪಿ ಪರಾರಿಯಾಗಿದ್ದಾನೆ. ಅಧ್ಯಾಪಕರ ಶವವನ್ನು ಮರಣೋತ್ತರ ಪರೋಕ್ಷೆಗೆ ಕಳುಹಿಸಲಾಗಿದೆ.

ಪಿಪಲ್ ಗ್ರಾಮದ ದಲ್ಬಿರ್ ಸಿಂಗ್ ರಾಜೀಕಿಯ ಮಹಾವಿದ್ಯಾಲಯದಲ್ಲಿ ಘಟನೆ ನಡೆದಿದೆ.ಕಾಲೇಜು ಶಿಕ್ಷಕ ರಾಜೇಶ್ ಕೊಲೆಯಾದ ವ್ಯಕ್ತಿ.2 ನೇ ವರ್ಷದಲ್ಲಿ ಓದುತ್ತಿರುವ ಜಗ್ಮಾಲ್ ಎಂಬ ವಿದ್ಯಾರ್ಥಿ ರಾಜೇಶ್ ನನ್ನು ಮೂರು ಬಾರಿ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ.ಕೊಲೆಗೆ ಕಾರಣ ಇನ್ನು ತಿಳಿದು ಬಂದಿಲ್ಲ.

ರಾಜೇಶ್ ಸ್ಟಾಪ್ ರೂಮಿನಲ್ಲಿರುವಾಗ ಅಲ್ಲಿಗೆ ಬಂದ ಜಗ್ಮಾಲ್ ಗುಂಡು ಹಾರಿಸಿದ್ದಾನೆ.ಗುಂಡಿನ ಶಬ್ಧ ಕೇಳಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ದಂಗಾಗಿದ್ದಾರೆ.ಘಟನಾ ಸ್ಥಳದಿಂದ ಜಗ್ಮಾಲ್ ತಪ್ಪಿಸಿಕೊಂಡಿದ್ದಾನೆ.ಆತನ ಪತ್ತೆ ಕಾರ್ಯ ಶುರುವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.ರಾಜೇಶ್ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

About the author

ಕನ್ನಡ ಟುಡೆ

Leave a Comment