ರಾಷ್ಟ್ರ

ಕಾವೇರಿ ನಿರ್ವಹಣಾ ಮಂಡಳಿ ರಚಿಸಿ ಎಂದು ಕೇಂದ್ರಕ್ಕೆ ಮನವಿ: ಕಮಲ್ ಹಾಸನ್

ಚೆನ್ನೈ: ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಆದೇಶದಂತೆ ಕಾವೇರಿ ನಿರ್ಹವಣಾ ಮಂಡಳಿ ರಚಿಸುವಂತೆ ನಟ ಮತ್ತು ಮಕ್ಕಳ ನೀತಿ ಮಯ್ಯಮ್ ಪಕ್ಷದ ಅಧ್ಯಕ್ಷ ಕಮಲ್ ಹಾಸನ್ ಅವರು ಕೇಂದ್ರ ಸರ್ಕಾರಕ್ಕೆ ಗುರುವಾರ ಮನವಿ ಮಾಡಿಕೊಂಡಿದ್ದಾರೆ.

ಕಾವೇರಿ ವಿವಾದ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು ಪ್ರಧಾನಮಂತ್ರಿಗಳ ಬಳಿ ಮನವಿ ಮಾಡಿಕೊಳ್ಳುತ್ತಿದ್ದೇನೆ. ದಯವಿಟ್ಟು ಕಾವೇರಿ ನಿರ್ವಹಣಾ ಮಂಡಳಿಯನ್ನು ರಚನೆ ಮಾಡಿ ನಿರ್ವಹಣಾ ಮಂಡಳಿ ರಚನೆ ಮಾಡುವ ಅಧಿಕಾರ ನಿಮಗಿದೆ ನೀವು ಮಾಡಲೇಬೇಕು ಎಂದು ಕಮಲ್ ಹೇಳಿದ್ದಾರೆ.

ನಿರ್ವಹಣಾ ಮಂಡಳಿ ರಚನೆ ಮಾಡಬೇಕೆಂದು ಬಯಸಿದಿರೆ ಪ್ರಧಾನಿ ಮೋದಿಯವರು ಸುಲಭವಾಗಿ ಮಾಡಬಹುದು ತಮಿಳುನಾಡು ಜನತೆಗೆ ಹಾಗೂ ರೈತರಿಗೆ ನೀರಿನ ಅಗತ್ಯವಿದೆ ಎಂದು ತಿಳಿಸಿದ್ದಾರೆ. ಹೀಗಾಗಿ ತಮಿಳುನಾಡು ಸರ್ಕಾರ ಕೇಂದ್ರದ ವಿರುದ್ಧ ತೀವ್ರ ಆಕ್ರೋಶಗಳನ್ನು ವ್ಯಕ್ತಪಡಿಸುತ್ತಿದೆ.

 

 

About the author

ಕನ್ನಡ ಟುಡೆ

Leave a Comment