ಕ್ರೀಡೆ ರಾಷ್ಟ್ರ

ಕಾವೇರಿ ವಿವಾದ: ಐಪಿಎಲ್ ಪಂದ್ಯಕ್ಕೂ ತಮಿಳುನಾಡಿನ ರಾಜಕೀಯ ಪಕ್ಷಗಳ ತಗಾದೆ

ಚೆನ್ನೈ: ಕಾವೇರಿ ವಿವಾದ ವಿಚಾರವಾಗಿ ತಮಿಳುನಾಡಿನ ರಾಜಕೀಯ ಪಕ್ಷಗಳು ಐಪಿಎಲ್‌ ಪಂದ್ಯಕ್ಕೂ ತಗಾದೆ ತೆಗೆದಿವೆ. ಕಾವೇರಿ ನದಿ ನೀರು ನಿರ್ವಹಣಾ ಮಂಡಳಿ ರಚನೆ ಆಗುವವರೆಗೂ ಏಪ್ರಿಲ್‌ 10ರ ಐಪಿಎಲ್‌ ಪಂದ್ಯವನ್ನು ನಿಷೇಧಿಸಬೇಕೆಂದು ಟಿವಿಕೆ ಪಕ್ಷ ಒತ್ತಾಯಿಸಿದೆ.ಚೆನ್ನೈನಲ್ಲಿ ಏಪ್ರಿಲ್‌ 10ರಂದು ಚೆನ್ನೈ ಸೂಪರ್‌ ಕಿಂಗ್ಸ್‌ ಮತ್ತು ಕೋಲ್ಕತ್ತಾ ನೈಟ್‌‌ ರೈಡರ್ಸ್‌‌ ನಡುವೆ ಮ್ಯಾಚ್‌ ನಿಗದಿಯಾಗಿದ್ದು, ಈ ಪಂದ್ಯವನ್ನು ಬ್ಯಾನ್‌ ಮಾಡಬೇಕೆಂದು ಪೊಲೀಸ್‌ ಆಯುಕ್ತರಿಗೆ ಟಿವಿಕೆ ಪಕ್ಷ ಮನವಿ ಸಲ್ಲಿಸಿದೆ.

ಕಾವೇರಿ ನದಿ ನೀರು ನಿರ್ವಹಣಾ ಮಂಡಳಿ ರಚನೆ ಆಗುವ ತನಕ .10 ಐಪಿಎಲ್‌  ಪಂದ್ಯ ಆಯೋಜಿಸಬಾರದು ಎಂದು ಚೆನ್ನೈ ಪೊಲೀಸ್ಆಯುಕ್ತರಿಗೆ ಮನವಿ ಮಾಡಿದ್ದೇವೆ. ಒಂದೇ ವೇಳೆ ಪಂದ್ಯವನ್ನು ಆಯೋಜಿಸಿದರೆ ಸ್ಟೇಡಿಯಂನಲ್ಲೇ ಪ್ರತಿಭಟನೆ ನಡೆಸಲಾಗುವುದು ಎಂದು ಟಿವಿಕೆ ಪಕ್ಷದ  ನಾಯಕ ಪಿ.ಟಿ.ವೇಲ್ಮುರುಗನ್ಎಚ್ಚರಿಸಿದ್ದಾರೆಆದರೆ, ಪ್ರತಿಭಟನೆ ಸಮಯದಲ್ಲಿ ಯಾವುದೇ ರೀತಿಯ ಗಲಾಟೆ, ಹಿಂಸಾಚಾರ ನಡೆಸಲ್ಲ  ಅಂತಾ ಅವರು ಭರವಸೆ ನೀಡಿದ್ದಾರೆಇನ್ನು, ಕಾವೇರಿ ನದಿ ನೀರು ನಿರ್ವಹಣಾ ಮಂಡಳಿ ರಚನೆಗೆ ಒತ್ತಾಯಿಸಿ ತಮಿಳುನಾಡಿನಲ್ಲಿ  ಈಗಾಗಲೇ ಹಲವು ಪಕ್ಷಗಳು ಪ್ರತಿಭಟನೆ ನಡೆಸುತ್ತಿದೆ. ಇಂದು ತಮಿಳುನಾಡು ಬಂದ್‌‌ಗೂ ಕೂಡ ಕರೆ  ನೀಡಲಾಗಿದೆ

About the author

Pradeep Kumar T R

Leave a Comment