ರಾಷ್ಟ್ರ

ಕಾವೇರಿ ವಿವಾದ ರಾಜೀನಾಮೆ ಸಲ್ಲಿಸಿದ ಎಐಎಡಿಎಂಕೆ ರಾಜ್ಯಸಭಾ ಸಂಸದ ಮುತ್ತುಕರುಪ್ಪನ್

ತಮಿಳುನಾಡು: ಕಾವೇರಿ ನಿರ್ವಹಣಾ ಮಂಡಳಿ ರಚಿಸದ ಕೇಂದ್ರ ಸರ್ಕಾರದ ವಿರುದ್ಧ ಎಐಎಡಿಎಂಕೆ ನಾಯಕರು ತೀವ್ರವಾಗಿ ಪ್ರತಿಭಟನೆಗೆ ಮುಂದಾಗಿದ್ದು ಈ ಸಮಯದಲ್ಲೆ ಎಐಎಡಿಎಂಕೆ ರಾಜ್ಯಸಭಾ ಸಂಸದ ಮುತ್ತುಕರುಪ್ಪನ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆಂದು ಇಂದು ತಿಳಿದುಬಂದಿದೆ. ರಾಜ್ಯಸಭಾ ಉಪಸಭಾಪತಿ ಎಂ.ವೆಂಕಯ್ಯ ನಾಯ್ಡು ಅವರ ಬಳಿ ಮುತ್ತುಕರುಪ್ಪನ್ ಅವರು ರಾಜಿನಾಮೆ ಸಲ್ಲಿಸಿದ್ದಾರೆಂದು ವರದಿಗಳು ತಿಳಿಸಿವೆ.

ಮುತ್ತುಕರುಪ್ಪನ್ ಅವರು ಸಲ್ಲಿಸಿರುವ ರಾಜೀನಾಮೆ ಪತ್ರ ಇದೀಗ ಬೆಳಕಿಗೆ ಬಂದಿದೆ ರಾಜೀನಾಮೆ ಪತ್ರವು ಅಧಿಕೃತವಾಗಿ ಸಲ್ಲಿಸುವ ರಾಜೀನಾಮೆ ಪತ್ರವಲ್ಲಾ ಅದು ಎನ್ನಲಾಗುತ್ತಿದೆ. ರಾಜೀನಾಮೆ ಪತ್ರ ತಿರಸ್ಕಾರಗೊಳ್ಳುವ ಸಾಧ್ಯತೆಗಳಿವೆ ಎಂದು ತಿಳಿದುಬರುತ್ತಿದೆ. ಎಐಎಡಿಎಂಕೆ ಸಂಸದ ಕಾವೇರಿ ನಿರ್ವಹಣಾ ಮಂಡಳಿ ರಚನೆ ಮಾಡಿದಿರುವುದಕ್ಕೆ ನೋವಾಗಿದೆ ಎಂದು ಹೇಳಿ ಎರಡು ಪುಟಗಳನ್ನು ಮೀರಿದ ಪತ್ರವನ್ನು ಬರೆದು ಸಲ್ಲಿಸಿದ್ದಾರೆ. ಈ ಹಿನ್ನಲೆಯಲ್ಲಿ ರಾಜೀನಾಮೆ ಪತ್ರವು ತಿರಸ್ಕಾರಗೊಳ್ಳುವ ಸಾಧ್ಯತೆಗಳಿವೆ ಎಂದು ತಿಳಿದುಬರುತ್ತಿದೆ.

 

About the author

ಕನ್ನಡ ಟುಡೆ

Leave a Comment