ರಾಜ್ಯ ಸುದ್ದಿ

ಮಂಡ್ಯ ಜಿಲ್ಲೆಯ ಕಾವೇರಿ ಹೋರಾಟಗಾರರ ವಿರುದ್ಧದ ಶೆ.95 ಕೇಸ್​ ವಾಪಸು ಪಡೆಯಲು ಸರ್ಕಾರದ ನಿರ್ಧಾರ

ಮದ್ದೂರು: ಮಂಡ್ಯ ಜಿಲ್ಲೆಯ ಕಾವೇರಿ ಹೋರಾಟಗಾರರ ಮೇಲಿನ ಶೇ.95 ಪ್ರಕರಣಗಳನ್ನು ಹಿಂಪಡೆಯಲು ರಾಜ್ಯ ಸರ್ಕಾರ ತೀರ್ಮಾನಿಸಿದೆ ಎಂದು ಸಚಿವ ಡಿ.ಸಿ. ತಮ್ಮಣ್ಣ ತಿಳಿಸಿದ್ದಾರೆ.

ಸಂಪುಟ ಉಪಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಕಾವೇರಿ ಹೋರಾಟದ ಸಂದರ್ಭದಲ್ಲಿ ಸರ್ಕಾರದ ಆಸ್ತಿ-ಪಾಸ್ತಿ ನಷ್ಟ ಮಾಡಿದ್ದ ಸಂಬಂಧ ದಾಖಲಾಗಿದ್ದ ಎಲ್ಲ ಕೇಸುಗಳನ್ನು ವಾಪಸು ಪಡೆಯಲಾಗುವುದು. ಈ ಕುರಿತು ಸಿಎಂ ಕುಮಾರಸ್ವಾಮಿ ಫೆ.27ರಂದು ಮಂಡ್ಯದಲ್ಲಿ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ತಿಳಿಸಿದರು.

ಈ ಸಂಬಂಧ ತಾಲೂಕುವಾರು ದಾಖಲಾಗಿರುವ ಪ್ರಕರಣಗಳ ಮಾಹಿತಿಯನ್ನು ಸಂಗ್ರಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಆದರೆ ಮಾಧ್ಯಮದವರ ಕ್ಯಾಮರಾಗಳಿಗೆ ಜಖಂ, ಕಾರು ಮತ್ತಿತರ ವಾಹನಗಳಿಗೆ ಜಖಂ, ಅಂಗಡಿಮುಂಗಟ್ಟುಗಳ ಮೇಲಿನ ಕಲ್ಲು ತೂರಾಟ ಪ್ರಕರಣ, ಪಾಂಡವಪುರ ನ್ಯಾಯಾಧೀಶರ ಮನೆ ಮೇಲಿನ ದಾಳಿ ಪ್ರಕರಣಗಳು ಸೇರಿ ಸ್ವತಂತ್ರ ಪ್ರಕರಣಗಳನ್ನು ನ್ಯಾಯಾಲಯಗಳಲ್ಲೇ ಇತ್ಯರ್ಥ ಪಡಿಸಿಕೊಳ್ಳಬೇಕಾಗುತ್ತದೆ ಎಂದು ಹೇಳಿದರು.

About the author

ಕನ್ನಡ ಟುಡೆ

Leave a Comment