ರಾಷ್ಟ್ರ ಸುದ್ದಿ

ಕಾಶಿ ವಿಶ್ವನಾಥ ಮಂದಿರ ಕಾರಿಡಾರ್‌ಗೆ ಪ್ರಧಾನಿ ನರೇಂದ್ರ ಮೋದಿ ಶಿಲಾನ್ಯಾಸ

ವಾರಾಣಸಿ: ಉತ್ತರಪ್ರದೇಶದ ವಾರಾಣಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಕಾಶಿ ವಿಶ್ವನಾಥ ಟೆಂಪಲ್ ಕಾರಿಡಾರ್‌ಗೆ ಶಿಲಾನ್ಯಾಸ ನೆರವೇರಿಸಿದರು. ಕಾಶಿ ವಿಶ್ವನಾಥ ಧಾಮದ ಕಡೆ ಸಾಗುವ ಮಾರ್ಗವನ್ನು ಮತ್ತಷ್ಟು ಅಗಲಗೊಳಿಸುವ ಹಾಗೂ ಸುಂದರಗೊಳಿಸುವ ಯೋಜನೆ ಇದಾಗಿದೆ. ತಾವು ಸಕ್ರಿಯ ರಾಜಕಾರಣಕ್ಕೆ ಬರುವ ಮೊದಲೇ ಕಾಶಿ ವಿಶ್ವನಾಥ ಧಾಮಕ್ಕೆ ಏನಾದರೂ ಸೇವೆ ಸಲ್ಲಿಸಬೇಕೆಂಬ ಕನಸು ಇತ್ತು ಎಂದು ಪ್ರಧಾನಿ ತಿಳಿಸಿದರು.

ಸಕ್ರಿಯ ರಾಜಕೀಯಕ್ಕೆ ಬರುವ ಮೊದಲೇ ಕಾಶಿಗೆ ನಾನು ಆಗಾಗ್ಗೆ ಬರುತ್ತಿದ್ದೆ. ಮಂದಿರ ಸಮುಚ್ಚಯಕ್ಕೆ ಏನಾದರೂ ಕೊಡುಗೆ ನೀಡಬೇಕೆಂದು ಆಗಲೇ ಯೋಚಿಸುತ್ತಿದ್ದೆ. ಭೋಲೇನಾಥದ ಆಶೀರ್ವಾದದಿಂದ ಈಗ ಅಂತಹ ಅವಕಾಶ ಒದಗಿ ಬಂದಿದೆ’ ಎಂದು ಪ್ರಧಾನಿ ಹೇಳಿರುವುದಾಗಿ ಎಎನ್‌ಐ ವರದಿ ಮಾಡಿದೆ. ಕಳೆದ ವರ್ಷ ವಿಶ್ವನಾಥ ಮಂದಿರಕ್ಕೆ ಭಯೋತ್ಪಾದಕರ ದಾಳಿ ಬೆದರಿಕೆ ಇತ್ತು. ಆದರೆ ಕೋಟ್ಯಂತರ ಭಕ್ತರ ನಂಬಿಕೆಯ ಶಕ್ತಿಯಿಂದ ಆ ಭಯ ದೂರವಾಯ್ತು. ಕಳೆದ ವರ್ಷದ ಜೂನ್‌ನಲ್ಲಿ ಪಾಕ್ ಮೂಲದ ಲಷ್ಕರೆ ತಯ್ಬಾ ಉಗ್ರ ಸಂಘಟನೆ ಕಾಶಿ ವಿಶ್ವನಾಥ ಮಂದಿರದ ಮೇಲೆ ದಾಳಿ ನಡೆಸುವ ಬೆದರಿಕೆ ಹಾಕಿತ್ತು.

 

About the author

ಕನ್ನಡ ಟುಡೆ

Leave a Comment