ಕವಿತೆಗಳು

ಕಾಶ್ಮೀರದಲ್ಲಿ ನಾನೊಂದು ಕನಸು ಕಂಡೆ

ಕಾಶ್ಮೀರದಲ್ಲಿ ನಾನೊಂದು ಕನಸು ಕಂಡೆ

ಆ ಕನಸಿನಲ್ಲಿ ವೀರಯೋಧರ ಕಂಡೆ

ಯೋಧರ ಬಾಯಲ್ಲಿ ಭಾರತಮಾತೆಯನ್ನು ಹೊಗಳುವುದು ಕಂಡೆ

ಅವರ ಮತ್ತು ನಮ್ಮ ಹೊಗಳಿಕೆ ನಿಜವಾಗಲೆಂದು ಹರಿಸಿಕೊಂಡೆ

ವೀರಯೋಧನಾಗಿ ಪಾಕ್ ಆಕ್ರಮಿತ ಕಾಶ್ಮೀರ ಬಿಡಸಲು

 

ಉಗ್ರಗಾಮಿಗಳನ್ನು ಸದೆ ಬಡಿಯಲು ನಾವು ಸಿದ್ದರಿದ್ದೇವೆ

ಎಂದು ಸಾರಲು ಸೇನೆಗೆ ಸೇರಲು ಹೊರೆಟೆವು

ಸೈನ್ಯಕ್ಕೆ ಸೇರಿದವು ಹಿಗ್ಗಿದೆವು ಭಾರತ ಮಾತೆಯ ಬಿಡುಗಡೆ ಕಚಿತ ಎಂದು ನುಡಿದೆವು.

ನೋಡು ನನ್ನ ತಾಯಿ ನಿನ್ನ ಮಡಿಲಲ್ಲಿ ಹುಟ್ಟಿದ ನಾವು

ಅಸಾಯಕರಾಗ ಬೇಕೆ ನಮಗೆ ಶಕ್ತಿ ಕೊಡು ನಿನ್ನನ್ನು

 

ದೇಶದ್ರೋಹಿಗಳ ಕಪಿಮುಷ್ಟಿಯಿಂದ ಪಾರು ಮಾಡುತ್ತೇವೆ

ಎಂದು ಶಪತಗೈದ್ದೇವೆ ಅದರಂತೆ ನಡೆಯುತ್ತೇವೆ

ದಯೆ ಇರಲಿ ತಾಯಿ ನಮ್ಮ ಪ್ರಾಣ ಹೋದರೆ ಅದು ನಿನಗಾಗಿ

ನಿನ್ನ ಮಡಿಲಲ್ಲಿ ಹೋಗಲಿ ಅದೊಂದೆ ನಮ್ಮ ಆಸೆಯ ಗೋಪುರ

ನಿನ್ನ ಮಡಿಲಲ್ಲಿ ಹುಟ್ಟುವ ಪ್ರತಿಯೊಬ್ಬರ ಬಯಕೆ ಇದೆ ತಾಯಿ

 

ರಮೇಶ.ಸಿಎಮ್

 

 

 

 

 

About the author

ಕನ್ನಡ ಟುಡೆ

Leave a Comment