ಅಂಕಣಗಳು

ಕಾಶ್ಮೀರಿ ಪಂಡಿತರಿಗಾದ ಗತಿ ಅಸ್ಸಾಮ್, ಪಶ್ಚಿಮ ಬಂಗಾಳದ ಜನತೆಗಾಗದಿರಲಿ

ಇತ್ತೀಚಿನ ಅಸ್ಸಾಮ್ ಜನಸಂಖ್ಯಾ ವರದಿ ದೇಶವನ್ನೆ ಬೆಚ್ಚಿ ಬಿಳಿಸಿದ ದೇಶಕ್ಕೆ ಮತ್ತು ರಾಜ್ಯಕ್ಕೆ ಸಂಬಂಧಪಡದ 40 ಲಕ್ಷ ವೀದೇಶಿಗರು ಭಾರತದಲ್ಲಿ ನೆಲೆಸಿರುವುದು ನಮ್ಮ ಭದ್ರತೆಯನ್ನು ಪ್ರಶ್ನಿಸುವಂತಿದೆ. ಇವರೆಲ್ಲಾ ಹೇಗೆ ಅಕ್ರಮವಾಗಿ ನಮ್ಮ ದೇಶದಲ್ಲಿ ಒಳನುಸುಳಿದರು? ಮತ್ತು ಅಕ್ರಮವಾಗಿ ನಮ್ಮ ದೇಶದಲ್ಲಿ ನೆಲೆಸಿ ನಮ್ಮ ದೇಶದ ಸವಲತ್ತುಗಳನ್ನೆಲ್ಲಾ ಪಡೆಯುತ್ತಿರುವುದು ಮ್ಮ ದೇಶದ ನಾಗರಿಕರಿಗೆ ಸವಲತ್ತಿನಿಂದ ವಂಚಿತರಾಗುತ್ತಿದ್ದಾರೆ ಮತ್ತು ಅಕ್ರಮ ವಲಸಿಗರಿಂದ ನಮ್ಮ ದೇಶಕ್ಕೆ ಆಪತ್ತಿದೆ ಎಂಬುವುದಂತ್ತು ಸುಳ್ಳಲ್ಲ.

ಇದೇ ರೀತಿ ಮೊದಮೊದಲು ಕಾಶ್ಮೀರದಲ್ಲಿ ನೆಲೆಸಿ ಈಗ ನಿಜವಾದ ಕಾಶ್ಮೀರಿಗರೇ ಜಮ್ಮು ಮತ್ತು ಕಾಶ್ಮೀರದಲ್ಲಿ ನೆಲೆಇಲ್ಲದಂತಾಗಿದೆ ಮತ್ತು ಕಾಶ್ಮೀರಿ ಪಂಡಿತರು ಜೀವ ಭಯದಿಂದ ದೇಶದ ಅನೇಕ ಪ್ರದೇಶಗಳಲ್ಲಿ ನೇಲೆಸುವಂತ ಪರಿಸ್ಥಿತಿ ಹೇಗೆ ನಿರ್ಮಾಣವಾಯೊತೋ ಅಂತಹ ಪರಿಸ್ಥಿತಿ ನಮ್ಮ ದೇಶದ ಅಸ್ಸಾಮ್  ಮತ್ತು ಪಶ್ಚಿಮ ಬಂಗಾಲದ ಜನತೆಗೆ ಆಗದಿರಲಿ. ಕೇಲ ವರ್ಷಗಳ ಹಿಂದೆ ಅಕ್ರಮವಾಗಿ ಬಾಂಗ್ಲಾ ದೇಶದ ಕೋಟ್ಯಾಂತರ ನುಸುಳುಕೋರರು ದೇಶದ ನಾನಾ ಭಾಗಗಳಲ್ಲಿ ನೆಲೆಸಿ ವಾಸಿಸಿತ್ತಿರುವದು ನಮಗೆ ತಿಳಿದೆ ಇದೆ, ಇಷ್ಟೆಲ್ಲಾ ದೇಶದಲ್ಲಿ ಭದ್ರತೆ ಇದ್ದರು ಅವರು ಬರುವ ಮಾರ್ಗಗಳಾದರೂ ಯಾವವು ಎಂಬುದು ಕೂಡಲೇ ಭಾರತ ಸರಕಾರ ಮತ್ತು ಆಯಾ ರಾಜ್ಯಗಳು ಕೂಡಲೇ ಎಚ್ಚೆತ್ತುಕೊಂಡು ಪರಿಹಾರ ಕಂಡುಕೊಳ್ಳಬೇಕು  ಇಲ್ಲದಿದ್ದರೆ ನಮ್ಮ ದೇಶಕ್ಕೆ ಈ ಅಕ್ರಮ ವಲಸಿಗರಿಂದ ದೊಡ್ಡ ಗಂಡಾಂತರವೇ ಎದುರಾಗಲಿದೆ.

ಅಕ್ರಮವಾಗಿ ಒಳನುಸುಳಿದ ಎಲ್ಲಾ ನುಸುಳಿಕೋರರನ್ನು ಹೊರದಬ್ಬುವ ಜವಾಬ್ದಾರಿ ಕೇಂದ್ರ ಸರಕಾರದ ಮೇಲಿದೆ ಆದಷ್ಟೊ ಬೆಗನೆ ತಡಮಾಡದೇ ಕಾರ್ಯಚರಣೆಗೆ ಇಳಿದು ನಮ್ಮ ದೇಶದ ನಾಗರಿಕರನ್ನು ರಕ್ಷಿಸಬೇಕಾಗಿದೆ, ನಮ್ಮ ದೇಶದಲ್ಲಿ ಇವರು ಇಲ್ಲ ಸಲ್ಲದ ದಂಗೆಗಳನ್ನು ಎಬ್ಬಿಸಲು ಸಿದ್ದವೂ ಆಗಿರಬಹುದು ಮತ್ತು ನಮ್ಮ ದೇಶದ ಆಂತರೀಕ ಭದ್ರತೆಗೆ ದಕ್ಕೆ ಆಗುವುದಂತೂ ಸುಳ್ಳಲ್ಲ. ಈಗಾಗಲೇ ಅನೇಕ ಸಾರಿ ದೇಶದಲ್ಲಿ ನಡೆದ ಗಲಭೆಗಳಿಗೆ ಅಕ್ರಮ ವಲಸಿಗರೇ ಕಾರಣವೆಂಬುದು ಸಹ ದೃಡಪಟ್ಟಿದೆ ಆದ್ದರಿಂದ ನಮ್ಮ ದೇಶದ ನಾಗರೀಕರ ರಕ್ಷಿಸುವ ಮತ್ತು ತಮ್ಮ ರಾಜ್ಯಗಳನ್ನೆ ಕಾಶ್ಮೀರ ಹಾಗೆ ಬಿಟ್ಟು ಹೋಗದ ಹಾಗೆ ನೋಡಿಕೋಳ್ಳಲಿ.

 

ಅಮಿತಕುಮಾರ ಬಿರಾದಾರ ವಿಜಯಪೂರ.  

 

About the author

ಕನ್ನಡ ಟುಡೆ

Leave a Comment