ಸಿನಿ ಸಮಾಚಾರ

ಕಿಚ್ಚ ಸುದೀಪ ನಿರ್ಮಾಣ ಮಾಡುತ್ತಿರು ಮುಂದಿನ ಸಿನಿಮಾ ಕೋಟಿಗೊಬ್ಬ3 ಗೆ ಚಾಲನೆ

ಬೆಂಗಳೂರು: ಸುದೀಪ್ ಅಭಿನಯದ ಕೋಟಿಗೊಬ್ಬ3 ಗೆ ಚಾಲನೆ ನೀಡಿದ್ದಾರೆ. ಶುಕ್ರವಾರ ಸರಳ ಪೂಜೆಯೊಂದಿಗೆ ನಿರ್ಮಾಪಕ ಮುನಿರತ್ನ ಚಾಲನೆ ನೀಡಿದ್ದಾರೆ. ಈ ವೇಳೆ ಸುದೀಪ್ ಪತ್ನಿ ಪ್ರಿಯಾ ರಾಮಕೃಷ್ಣ ಹಾಗೂ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಇದ್ದರು.

ಅರ್ಜುನ್ ಜನ್ಯ ಸಂಗೀತ ನೀಡಲಿದ್ದಾರೆ. ಸಿನಿಮಾದ ಕಥೆಯನ್ನು ಕಿಚ್ಚ ಸುದೀಪ್ ಬರೆದಿದ್ದಾರೆ. ಸಾಕಷ್ಟು ವಿಚಾರಗಳಿಂದ ಈಗಾಗಲೇ ಭಾರಿ ಸುದ್ದಿ ಮಾಡಿರುವ ಕೋಟಿಗೊಬ್ಬ3 ಸಿನಿಮಾ ಆರಂಭದಲ್ಲೇ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.

ನಿನ್ನೆಯಿಂದಲೇ ಚಿತ್ರತಂಡಕ್ಕೆ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

 

About the author

ಕನ್ನಡ ಟುಡೆ

Leave a Comment