ರಾಜಕೀಯ

ಕಿರಿಕಿರಿ ಖಾತೆ ಇಟ್ಕೊಂಡು​ ಏನು ಮಾಡ್ಲಿ ನನಗೆ ಪ್ರಭಾವಿ ಖಾತೆ ನೀಡದಿದ್ದರೆ ರಾಜೀನಾಮೆ ಕೊಡ್ತೇನೆ: ಕಾಂಗ್ರಸ್​ ಶಾಸಕ ವೆಂಕಟರಮಣಪ್ಪ

ಬೆಂಗಳೂರು: ನನಗೆ ಪ್ರಭಾವಿ ಖಾತೆ ನೀಡದಿದ್ದರೆ ರಾಜೀನಾಮೆ ಕೊಡ್ತೇನೆ. ಕಿತ್ತೋದ ಕಾರ್ಮಿಕ ಖಾತೆ ಇಟ್ಟುಕೊಂಡು ನಾನೇನು ಮಾಡಲಿ ಎಂದು ಕಾಂಗ್ರಸ್​ ಶಾಸಕ ವೆಂಕಟರಮಣಪ್ಪ ಖ್ಯಾತೆ ತೆಗೆದಿದ್ದಾರೆ ಎನ್ನಲಾಗಿದೆ. ಅಧಿಕಾರಿಗಳ ಕಿರಿಕಿರಿ ಜತೆ ಖಾತೆ ಇಟ್ಟುಕೊಂಡು ನಾನೇನು ಮಾಡಲಿ. ಕಾರ್ಮಿಕ ಖಾತೆಯಲ್ಲಿ ಕೆಲಸ ಇಲ್ಲ, ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ನನಗೆ ಬೇರೆ ಯಾವುದಾದರೂ ಪ್ರಭಾವಿ ಖಾತೆ ಕೊಡುವುದಾದರೆ ಕೊಡಲಿ. ಇಲ್ಲದಿದ್ದರೆ ನನ್ನ ದಾರಿ ನನಗೆ ಎಂದು ಪಾವಗಡ ಶಾಸಕ ಮೈತ್ರಿ ಸರ್ಕಾರದ ಮುಖಂಡರಿಗೆ ಸಂದೇಶ ರವಾನಿಸಿದ್ದಾರೆ.

ಅ.10ರ ನಂತರ ಸಂಪುಟ ವಿಸ್ತರಣೆ ಆಗುವ ಸುಳಿವು ಹಿನ್ನೆಲೆಯಲ್ಲಿ ಪ್ರಭಾವಿ ಖಾತೆಗೆ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದ್ದು, ಸಂಪುಟ ವಿಸ್ತರಣೆ ಜತೆಗೆ ಈಗಿರುವ ಎಲ್ಲ ಸಚಿವರ ಖಾತೆ ಬದಲಾವಣೆಗೆ ದೋಸ್ತಿ ಮುಖಂಡರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. 

About the author

ಕನ್ನಡ ಟುಡೆ

Leave a Comment