ದೇಶ ವಿದೇಶ

ಕಿರುಕುಳಕ್ಕೆ ಬೇಸತ್ತು ಜೆಸ್ಕಾಂ ಅಧಿಕಾರಿ ಆತ್ಮಹತ್ಯೆಗೆ ಯತ್ನ..

Kannada today:

ಮೇಲಾಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಜೆಸ್ಕಾಂ ಇಲಾಖೆಯ ಜೆಇ ಓವ೯ ಡೆತ್ ನೋಟ್ ಬರೆದಿಟ್ಟು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ. ರಾಯಚೂರು ಜಿಲ್ಲೆಯ ಲಿಂಗಸ್ಗೂರು ತಾಲ್ಲೂಕಿನ ಹಟ್ಟಿ ವಿಭಾಗದ ಜೆಇ ಶ್ರೀಧರ್ ಜೋಶಿ ಎಂಬುವವರೇ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯಾಗಿದ್ದು, ಲಿಂಗಸ್ಗೂರು ವಿಭಾಗದ ಎಇಇ ದವಲಸಾಬ್ ನಧಾಫ್, ಹಾಗೂ ರಾಯಚೂರಿನ ಎಸ್.ಇ. ಕೃಷ್ಣಪ್ಪ ತಮನಗೆ ಅನಗತ್ಯ ಕಿರಿಕುಳ ನೀಡಿ ವಗಾ೯ವಣೆ ಮಾಡಿದ್ದಾರೆ. ಹಾಗಾಗಿ ನನ್ನ ಸಾವಿಗೆ ನೇರವಾಗಿ ಇವರಿಬ್ಬರೇ ಕಾರಣ ಅಂತ ಡೆತ್ ನೋಟ್ ನಲ್ಲಿ ಬರೆದಿಟ್ಟು ವಿಷ ಸೇವಿಸಿದ್ದಾನೆ. ಗಂಭೀರ ಸ್ಥಿತಿಯಲ್ಲಿರೋ ಜೋಶಿಯನ್ನ ರಾಯಚೂರು ರಿಮ್ಸ್ ಆಸ್ಪತ್ರೆಗೆ ಆಂಬ್ಯುಲೆನ್ಸ್ ಮೂಲಕ ರವಾನಿಸಲಾಗಿದೆ. ಇನ್ನು ಈ ಕುರಿತು ಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.

About the author

ಕನ್ನಡ ಟುಡೆ

Leave a Comment