ರಾಜ್ಯ ಸುದ್ದಿ

ಕಿರುಕುಳ ನೀಡುವ ಬದಲು ಸೀದಾ ರೈತರ ಕತ್ತನ್ನು ಕಡಿದು ಬಿಡಿ : ನ್ಯಾ. ಬಿ. ವೀರಪ್ಪ ಕಿಡಿ

ಬೆಂಗಳೂರು: ‘ಜಮೀನು ಇಲಾಖೆಗೆ ಸೇರಿದೆ ಎಂದು ತೋಟದ ಮಾವಿನ ಮರಗಳನ್ನ ಕಡಿದಿರುವುದು ಎಷ್ಟು ಸರಿ? ಈ ರೀತಿ ಕಿರುಕುಳ ನೀಡುವ ಬದಲು ಸೀದಾ ರೈತರ ಕತ್ತನ್ನು ಕಡಿದುಬಿಡಲಿ, ಒಂದೇ ಬಾರಿ ಪ್ರಾಣಾ ಬಿಡ್ತಾರೆ’ ಎಂದು ಹೈಕೋರ್ಟ್‌ ಮೌಖಿಕವಾಗಿ ಅಸಮಾಧಾನ ವ್ಯಕ್ತಪಡಿಸಿ, ಸರಕಾರವನ್ನು ತರಾಟೆಗೆ ತೆಗೆದುಕೊಂಡಿತು.

ಜಮೀನು ಅರಣ್ಯ ಇಲಾಖೆಗೆ ಸೇರಿದೆ ಎಂದು ಸರಕಾರ ಆದೇಶ ಮಾಡಿದ್ದನ್ನು ಪ್ರಶ್ನಿಸಿ ಕೋಲಾರ ಜಿಲ್ಲೆ ಶ್ರೀನಿವಾಸಪುರ ಗ್ರಾಮದ ರೈತ ಬಿ.ಎಂ.ಪ್ರಕಾಶ್‌ ಸಲ್ಲಿಸಿದ ಅರ್ಜಿ ವಿಚಾರಣೆ ವೇಳೆ ನ್ಯಾ.ಬಿ.ವೀರಪ್ಪ ಅವರಿದ್ದ ಏಕಸದಸ್ಯಪೀಠ ಈ ರೀತಿ ಹೇಳಿತು. ಕೆಲ ಕಾಲ ವಿಚಾರಣೆ ಆಲಿಸಿದ ಬಳಿಕ ಸರಕಾರಕ್ಕೆ ಆಕ್ಷೇಪ ಸಲ್ಲಿಸುವಂತೆ ನಿರ್ದೇಶನ ನೀಡಿತು. ”ರೈತ ದೇಶದ ಬೆನ್ನೆಲುಬು ಅಂತಾರೆ. ಆದರೆ, ಅಧಿಕಾರಕ್ಕೆ ಬಂದವರೆಲ್ಲಾ ರೈತನ ಬೆನ್ನಲುಬು ಮುರಿದು ಮೂಲೆಗೆ ಹಾಕುತ್ತಾರೆ. ಇದು ರೈತನ ಪರಿಸ್ಥಿತಿ,ಇದೇ ಕಟು ಸತ್ಯ” ಎಂದು ನ್ಯಾಯಮೂರ್ತಿಗಳು ಮೌಖಿಕವಾಗಿ ಅಸಮಾಧಾನ ವ್ಯಕ್ತಪಡಿಸಿದರು.

ದೇಶದಲ್ಲಿ ಯಾರೇ ಅಧಿಕಾರಕ್ಕೆ ಬಂದರೂ ರೈತ ಮಾತ್ರ ಉದ್ಧಾರ ಆಗೋಲ್ಲ. ಅಧಿಕಾರಕ್ಕೆ ಬರುವ ಮುನ್ನ ರೈತರ ಹಿತರಕ್ಷ ಣೆ ಮಾಡ್ತೀವೆ ಅಂತಾರೆ. ಕೊನೆಗೆ ಮರೆತುಬಿಡುತ್ತಾರೆ. ಎಲ್ಲರೂ ಕೇವಲ ಭಾಷಣ ಮಾಡುತ್ತಾರೆ, ಎಂದು ಹೇಳಿದರು.

About the author

ಕನ್ನಡ ಟುಡೆ

Leave a Comment