ಸಿನಿ ಸಮಾಚಾರ

ಕೀರ್ತಿಗೌಡ ಮೇಲೆ ಹಲ್ಲೆಗೈದ ದುನಿಯಾ ವಿಜಯ್ ಮೊದಲ ಪತ್ನಿ ನಾಗರತ್ನ, ಬಂಧನ ಸಾಧ್ಯತೆ

ಬೆಂಗಳೂರು: ನಟ ದುನಿಯಾ ವಿಜಯ್​ ಮನೆ ಜಗಳ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಮನೆಗೆ ನುಗ್ಗಿ ಕೀರ್ತಿಗೌಡ ಮೇಲೆ ಹಲ್ಲೆ ಮಾಡಿದ ಆರೋಪದಲ್ಲಿ ವಿಜಿ ಮೊದಲ ಪತ್ನಿ ನಾಗರತ್ನ ಬಂಧನವಾಗುವ ಸಾಧ್ಯತೆಯಿದೆ. ಇತ್ತ ವಿಜಿ ಹೆಸರು ಹಾಳು ಮಾಡಲು ಈ ರೀತಿ ಮಾಡುತ್ತಿದ್ದಾರೆ ಎಂದು ವಿಜಿ ಸಂಬಂಧಿ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೆಪ್ಟೆಂಬರ್‌ 23 ರಂದು ತನಗೆ ಹಾಗೂ ನನ್ನ ಮಾವನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ನಾಗರತ್ನ ಹಲ್ಲೆ ಮಾಡಿದ್ದಾರೆ. ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವ ಅಡನ್ ಶಾಲೆ ಬಳಿ ಇರುವ ಮನೆಯಲ್ಲಿ ಗಂಡನ ಸ್ನೇಹಿತರು ಇರುವಾಗ ನಾಗರತ್ನ ಏಕಾಏಕಿ ಬಂದು ಚಪ್ಪಲಿಯಲ್ಲಿ ಹೊಡೆದು, ಹಲ್ಲೆ ಮಾಡಿ ವಿಕೃತ ಮೆರೆದಿದ್ದಾರೆ. ಆದರೆ, ನಾಗರತ್ನ ನನ್ನ ಮೇಲೆಯೇ ಹಲ್ಲೆಯಾಗಿದೆ ಎಂದು ಸುಳ್ಳು ದೂರು ನೀಡಿದ್ದಾರೆ ಎಂದು ಕೀರ್ತಿಗೌಡ ತನ್ನ ಮೇಲಿನ ಹಲ್ಲೆಗೆ ಸಂಬಂಧಿಸಿದ ಸಿಸಿಟಿವಿ ದೃಶ್ಯಾವಳಿಯನ್ನು ಠಾಣೆಗೆ ನೀಡಿ ದೂರು ಪ್ರತಿ ದೂರು ಸಲ್ಲಿಸಿದ್ದಾರೆ.

ಹಲ್ಲೆಗೆ ನಾಗರತ್ನಾ ಮಗಳು ಮೋನಿಕಾ ಕುಮ್ಮಕ್ಕು ನೀಡಿರುವ ಆರೋಪವು ಕೀರ್ತಿಗೌಡರಿಂದ ವ್ಯಕ್ತವಾಗಿದ್ದು, ಡ್ರೈವರ್ ಮಹಮ್ಮದ್ ಹಾಗೂ ನಾಗರತ್ನ ತಮ್ಮ ಸಂಪತ್ ಎಂಬವವರಿಂದಲೂ ಹಲ್ಲೆಯಾಗಿದೆ ಎಂದು ದೂರಿದ್ದಾರೆ.

ವಿಜಯ್ ಅವರ ಹೆಸರು ಹಾಳುಮಾಡಲು ಕೇಸ್: ವಿಜಯ್ ಸಂಬಂಧಿ ನೀನಾಸಂ ಮಂಜು, ಪತ್ರಿಕಾಗೋಷ್ಠಿ ನಡೆಸಿ, ನಾಗರತ್ನ ಅವರೇ ಬಂದು ಕೀರ್ತಿಗೌಡ ಮೇಲೆ ಹಲ್ಲೆ ಮಾಡಿ, ವಿಜಿ ಹೆಸರು ಹಾಳುಮಾಡಲು ಸುಳ್ಳು ಕೇಸ್​ಗಳನ್ನು ದಾಖಲಿಸುತ್ತಲೇ ಇದ್ದಾರೆ. ಆದರೆ, ವಿಜಿ, ಕೀರ್ತಿಗೌಡ ಇಲ್ಲಿವರೆಗೆ ಕೇಸ್ ದಾಖಲಿಸಿಲ್ಲ. ಈಗಾಗಲೇ ಅವರ ಮೇಲೆ 307 ಕೇಸ್ ದಾಖಲಾಗಿದೆ. ಅವರ ಮಗಳು ಮನೆಯ ಬಾಗಿಲಿಗೆ ಕಲ್ಲಿನಿಂದ ಹೊಡೆದಿದ್ದಾಳೆ. ತಪ್ಪು ಮಾಡಿದ್ದರಿಂದಲೇ ನಾಗರತ್ನ ತಲೆಮರೆಸಿಕೊಂಡಿದ್ದಾರೆ ಎಂದು ಹೇಳಿದರು.

ಕೀರ್ತಿಗೌಡ ಮೇಲೆ ಹಲ್ಲೆ ವೇಳೆ ನಾನು ಅಲ್ಲಿಯೇ ಇದ್ದೆ. ಸತ್ಯ ಹೇಳುವುದಕ್ಕಾಗಿ ನಾನು ಶೂಟಿಂಗ್ ಬಿಟ್ಟು ಬಂದಿದ್ದೇನೆ. ಪೂರ್ವನಿಯೋಜಿತವಾಗಿ ಕೀರ್ತಿಗೌಡ ಮೇಲೆ ಹಲ್ಲೆ ನಡೆಸಲಾಗಿದೆ. ಡಿವಿಆರ್​​ ತೆಗೆದುಕೊಂಡು ಹೋಗಿ ಹಾಳುಮಾಡಿದ್ದಾರೆ. ಸಾಕ್ಷಿನಾಶ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಬೇಕು. ಕೀರ್ತಿಗೌಡ ಮಕ್ಕಳನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳುತ್ತಿದ್ದರು. ಹಲ್ಲೆ ನಡೆಸಿದ ನಾಗರತ್ನ ಅವರನ್ನು ಬಂಧಿಸಬೇಕು. ವಿಜಯ್​ಗೆ ನ್ಯಾಯ ಕೊಡಿಸಬೇಕು ಎಂದು ಮಂಜು ಆಗ್ರಹಿಸಿದ್ದಾರೆ.

About the author

ಕನ್ನಡ ಟುಡೆ

Leave a Comment