ಕ್ರೀಡೆ

ಕುಂಬ್ಳೆ ಮುಂದುವರಿಯುವುದೇ ನಮ್ಮ ಬಯಕೆಯಾಗಿತ್ತು

ವಿಶಾಖಪಟ್ಟಣ: “ಅನಿಲ್‌ ಕುಂಬ್ಳೆ ಅವರೇ ಟೀಮ್‌ ಇಂಡಿಯಾದ ಕೋಚ್‌ ಆಗಿ ಮುಂದುವರಿಯಬೇಕೆಂಬುದು ನಮ್ಮ ಬಯಕೆಯಾಗಿತ್ತು, ಆದರೆ ಅವರು ನಿವೃತ್ತಿಗೆ ಹೆಚ್ಚಿನ ಆಸಕ್ತಿ ತೋರಿದರು’ ಎಂಬುದಾಗಿ ಬಿಸಿಸಿಐ ಕ್ರಿಕೆಟ್‌ ಸಲಹಾ ಸಮಿತಿಯ (ಸಿ.ಎ.ಸಿ.) ಸದಸ್ಯ, ಬ್ಯಾಟಿಂಗ್‌ ಲೆಜೆಂಡ್‌ ವಿವಿಎಸ್‌ ಲಕ್ಷ್ಮಣ್‌ ಹೇಳಿದ್ದಾರೆ. ವಿಶಾಖಪಟ್ಟಣದಲ್ಲಿ ನಡೆದ “ಇಂಡಿಯಾ ಟುಡೇ ಸೌತ್‌ ಕಾನ್‌ಕ್ಲೇವ್‌’ ಸಮಾರಂಭದ ವೇಳೆ ಲಕ್ಷ್ಮಣ್‌ ಕಳೆದ ವರ್ಷದ ಕೋಚ್‌ ವಿವಾದಕ್ಕೆ ಸಂಬಂಧಿಸಿದಂತೆ ಮಾಧ್ಯಮದವರೊಂದಿಗೆ ಮಾತಾಡಿದರು.

“ಕೊಹ್ಲಿ ಗೆರೆ ದಾಟಿದ್ದಾರೆ ಎಂದು ನನಗನಿಸದು. ಅನಿಲ್‌ ಕುಂಬ್ಳೆ ಅವರೇ ಭಾರತ ತಂಡದ ಕೋಚ್‌ ಆಗಿ ಮುಂದುವರಿಯಬೇಕು ಎಂದು ಸಿ.ಎ.ಸಿ. ಸದಸ್ಯರೆಲ್ಲರೂ ಬಯಸಿದ್ದರು. ಆದರೆ ಕುಂಬ್ಳೆ ಮಾತ್ರ ನಿವೃತ್ತಿಯೇ ಸರಿಯಾದ ಹೆಜ್ಜೆ ಎಂಬ ನಿರ್ಧಾರಕ್ಕೆ ಬಂದರು. ಇದೊಂದು ಕಹಿ ಅನುಭವವಾಗಿ ಉಳಿದಿದೆ’ ಎಂದು ಲಕ್ಷ್ಮಣ್‌ ಕಳೆದ ವರ್ಷದ ವಿದ್ಯಮಾನದ ಕುರಿತು ಹೇಳಿದರು. ಲಕ್ಷ್ಮಣ್‌, ತೆಂಡುಲ್ಕರ್‌ ಮತ್ತು ಗಂಗೂಲಿ ಅವರನ್ನೊಳಗೊಂಡ ಬಿಸಿಸಿಐ ಕ್ರಿಕೆಟ್‌ ಸಲಹಾ ಸಮಿತಿಯೇ ಅನಿಲ್‌ ಕುಂಬ್ಳೆ ಅವರನ್ನು 2016ರಲ್ಲಿ ಭಾರತೀಯ ಕ್ರಿಕೆಟ್‌ ತಂಡದ ಕೋಚ್‌ ಆಗಿ ನೇಮಿಸಿತ್ತು.

 

About the author

ಕನ್ನಡ ಟುಡೆ

Leave a Comment