ರಾಷ್ಟ್ರ ಸುದ್ದಿ

ಕುಂಭಮೇಳ: ಮೌನಿ ಅಮಾವಾಸ್ಯೆ ಪ್ರಯುಕ್ತ ಇಂದು ಲಕ್ಷಾಂತರ ಭಕ್ತರಿಂದ ಶಾಹಿ ಸ್ನಾನ

ಪ್ರಯಾಗ್​ರಾಜ್​: ಉತ್ತರ ಪ್ರದೇಶದ ಪ್ರಯಾಗ್​ ರಾಜ್​ನಲ್ಲಿ ನಡೆಯುತ್ತಿರುವ ಜಗತ್​ಪ್ರಸಿದ್ಧ ಕುಂಭಮೇಳದಲ್ಲಿ ಇಂದು ಮೌನಿ ಅಮಾವಾಸ್ಯೆ ಪ್ರಯುಕ್ತ ಲಕ್ಷಾಂತರ ಭಕ್ತರು ಶಾಹಿ ಸ್ನಾನ ಮಾಡಿದರು.

ಜನವರಿ 14 ರಿಂದ ಕುಂಭಮೇಳ ಆರಂಭವಾಗಿದ್ದು, ಮಾರ್ಚ್​ 4ರ ವರೆಗೆ ನಡೆಯಲಿದೆ. ಮಕರ ಸಂಕ್ರಾಂತಿಯಂದು ಮೊದಲ ಶಾಹಿ ಸ್ನಾನ ಮಾಡಿದ್ದ ಭಕ್ತರು ಇಂದು ಎರಡನೇ ಪವಿತ್ರ ಸ್ನಾನ ಮಾಡಿದರು. ಕುಂಭಮೇಳದಲ್ಲಿ ಶಾಹಿ ಸ್ನಾನ ಮಾಡಿದರೆ ಮೋಕ್ಷ ಸಿಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ. ಈ ಹಿನ್ನೆಲೆಯಲ್ಲಿ ಬೆಳಗಿನ ಜಾವ 3 ಗಂಟೆಯಿಂದಲೇ ಭಕ್ತಾದಿಗಳು ಸಾಗರೋಪಾದಿಯಲ್ಲಿ ಆಗಮಿಸಿದ್ದು, ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದರು. ಇಂದು ಸುಮಾರು 3 ಕೋಟಿ ಜನರು ಶಾಹಿ ಸ್ನಾನದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

About the author

ಕನ್ನಡ ಟುಡೆ

Leave a Comment