ರಾಷ್ಟ್ರ ಸುದ್ದಿ

ಕುಂಭ ಮೇಳ ಯಶಸ್ವಿಗೊಳಿಸಿದ್ದಕ್ಕೆ ಉತ್ತರ ಪ್ರದೇಶ ಜನತೆಗೆ ಮೋದಿ ಅಭಿನಂದನೆ

ನವದೆಹಲಿ: 2019ರ ಕುಂಭಮೇಳವನ್ನು  ಯಶಸ್ವಿಗೊಳಿಸಿದ್ದಕ್ಕೆ ಉತ್ತರ ಪ್ರದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ತಿಳಿಸಿದ್ದಾರೆ. ಉತ್ತರ ಪ್ರದೇಶದ ಜನತೆ ಅದರಲ್ಲೂ ಪ್ರಯಾಗ್ ರಾಜ್ ನ ಜನತೆ ಹಾಗೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರದ ಅಡಿಯಲ್ಲಿ ಇಡೀ ಕಾರ್ಯಕ್ರಮ ಸುಸೂತ್ರವಾಗಿ ನಡೆದಿದೆ ಎಂದು ಪ್ರದಾನಿ  ಮೋದಿ ಮೆಚ್ಚುಗೆ ವ್ಯಕ್ತ ಪಡಿಸಿ ಟ್ವೀಟ್ ಮಾಡಿದ್ದಾರೆ. ಕುಂಭ ಮೇಳ ನಮ್ಮ ಸಂಸ್ಕೃತಿಯ ಪ್ರತೀಕವಾಗಿದೆ, ನಮ್ಮ ಆದ್ಯಾತ್ಮಿಕ ನೆಲೆಯಲ್ಲಿ ನಡೆದ ಈ ಕುಂಭಮೇಳ ಮುಂದಿನ ಹಲವು ವರ್ಷಗಳ ವರೆಗೂ ನೆನಪಿನಲ್ಲಿರುತ್ತದೆ ಎಂದು ಹೇಳಿದ್ದಾರೆ.

About the author

ಕನ್ನಡ ಟುಡೆ

Leave a Comment