ರಾಜಕೀಯ

ಕುಕ್ಕರ್, ಗ್ಯಾಸ್ ಸ್ಟೌ, ಇಸ್ತ್ರಿಪೆಟ್ಟಿಗೆ ಆಯ್ತು ಈಗ ಸ್ಯಾನಿಟರಿ ನ್ಯಾಪ್‌ಕಿನ್‌ ಸರದಿ!

ಬೆಳಗಾವಿ: ಇಷ್ಟುದಿನ ಚುನಾವಣೆ ಅಂಗವಾಗಿ ಬೆಳಗಾವಿಯಲ್ಲಿ ಗ್ಯಾಸ್ ಸ್ಟೌ, ಕುಕ್ಕರ್​, ಇಸ್ತ್ರಿ ಪೆಟ್ಟಿಗೆ ಹಂಚಿದ್ದ ಟಿಕೆಟ್ ಆಕಾಂಕ್ಷಿಗಳು ಇದೀಗ ಮಹಿಳೆಯರಿಗೆ ಸ್ಯಾನಿಟರಿ ನ್ಯಾಪ್‌ಕಿನ್‌ ಹಂಚಿಕೆಗೆ ಮುಂದಾಗಿದ್ದಾರೆ.

ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಬೆಳಗಾವಿಯ ಉತ್ತರ ಮತಕ್ಷೇತ್ರದಲ್ಲಿ ಅನಿಲ್‌ ಬೆನಕೆ ಬೆಂಬಲಿಗರಿಂದ ಮತದಾರರಿಗೆ ಆಮಿಷ ಒಡ್ಡಲಾಗಿದ್ದು, ಮಹಿಳೆಯರಿಗೆ ಪ್ಯಾಡ್‌ ವಿತರಣೆ ಮಾಡಿದ್ದಾರೆ. ಇದರಿಂದ ಮಹಿಳೆಯರು ಮುಜುಗರಕ್ಕೊಳಗಾಗಿದ್ದು, ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶ್ರೀನಗರ ಗಾರ್ಡನ್‌ ಬಳಿ ಪ್ರತಿಭಟನೆ ನಡೆಸಿದ ಮಹಿಳೆಯರು, ಅನಿಲ್‌ ಬೆನಕೆ ವಿರುದ್ಧ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ. ಇದಕ್ಕೂ ಮುನ್ನ ಬೆಳಗಾವಿಯಲ್ಲಿ ಮಾರ್ಚ್ 31ರಂದು ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಸೇರಿದ್ದ ಲಾರಿ ಮೇಲೆ ರೇಡ್‌ ಮಾಡಿದ್ದ ವೇಳೆ, ನೂರಾರು ಕುಕ್ಕರ್, ಗ್ಯಾಸ್ ಸ್ಟೌ, ಇಸ್ತ್ರಿಪೆಟ್ಟಿಗೆ ಪತ್ತೆ ಆಗಿದ್ದವು.

About the author

ಕನ್ನಡ ಟುಡೆ

Leave a Comment