ರಾಷ್ಟ್ರ ಸುದ್ದಿ

ಕುದಿಯುತ್ತಿದ್ದ ಸಕ್ಕರೆ ಪಾಕದಲ್ಲಿ ಬಿದ್ದು ಮಗು ಸಾವು

ಔರಂಗಾಬಾದ್: ಕುದಿಯುತ್ತಿದ್ದ ಸಕ್ಕರೆ ಪಾಕದ ಪಾತ್ರೆಗೆ ಬಿದ್ದು 2 ವರ್ಷದ ಮಗು ಸಾವನ್ನಪ್ಪಿದ ಕರುಣಾಜನಕ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ರಾಜವೀರ್ ನಿತಿನ್ ಮೆಘ್‌ವಾಲೆ ಮೃತ ದುರ್ದೈವಿ.

ಪೈಥಾನ್ ಗೇಟ್‌ನ ದಳಲ್ವಾಡಿಯಲ್ಲಿ ಧಾರ್ಮಿಕ ಉತ್ಸವಕ್ಕಾಗಿ ಅಡುಗೆಯನ್ನು ಸಿದ್ಧಪಡಿಸಲಾಗುತ್ತಿತ್ತು. ಪ್ರಸಾದದ ರೂಪದಲ್ಲಿ ವಿತರಿಸಲೆಂದು ಗುಲಾಮ ಜಾಮೂನ್

ತಯಾರಿಸಲು ಸಕ್ಕರೆ ಪಾಕವನ್ನು ಕುದಿಸಲು ಇಡಲಾಗಿತ್ತು. ಅಲ್ಲೇ ಹತ್ತಿರದಲ್ಲಿ ಆಟವಾಡುತ್ತಿದ್ದ ಬಾಲಕ ಆಕಸ್ಮಿಕವಾಗಿ ಆ ಕುದಿಯುತ್ತಿದ್ದ ಆ ಮಿಶ್ರಣದಲ್ಲಿ ಬಿದ್ದು ಸಂಪೂರ್ಣವಾಗಿ ಬೆಂದು ಹೋಗಿದ್ದಾನೆ. ತಕ್ಷಣ ಆತನನ್ನು ಸರ್ಕಾರಿ ಕಾಲೇಜು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಸಾವನ್ನಪ್ಪಿದ್ದಾನೆ.ಆಕಸ್ಮಿಕ ಸಾವು ಪ್ರಕರಣ ದಾಖಲಿಸಿಕೊಂಡಿರುವ ಕ್ರಾಂತಿ ಚೌಕ್ ಠಾಣೆ ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ.

About the author

ಕನ್ನಡ ಟುಡೆ

Leave a Comment