ರಾಜಕೀಯ

ಕುದಿಯುತ್ತಿರುವ ಅಸಮಾಧಾನಕ್ಕೆ ನೀರೆರೆದ ಮಾಜಿ ಸಿಎಂ: ಸಿದ್ದರಾಮಯ್ಯ ಭೇಟಿ ನಂತರ ತಣ್ಣಗಾದ ರೆಡ್ಡಿ

ಬೆಂಗಳೂರು:  ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳದಿರುವ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿದ್ದ ಹಿರಿಯ ಶಾಸಕ ರಾಮಲಿಂಗಾರೆಡ್ಡಿಯವರ ಮನವೊಲಿಕೆ ಯತ್ನ ಫಲ ನೀಡಿದೆ. ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಭೇಟಿ ನಂತರ ತಣ್ಣಗಾಗಿದ್ದಾರೆ.
ಈ ಬಾರಿ ಸಮ್ಮಿಶ್ರ ಸರ್ಕಾರ ಇರುವುದರಿಂದ ಸಚಿವ ಸ್ಥಾನ ನೀಡಲು ಸಾಧ್ಯವಾಗಿಲ್ಲ ಎಂಬ ಮಾತುಗಳನ್ನು ನಾಯಕರು ಹೇಳಿದರು. ಅದು ನನಗೂ ಗೊತ್ತಿತ್ತು. ಆದರೆ ನಮ್ಮಲ್ಲಾಗಿರುವ ಸಣ್ಣ ಪುಟ್ಟ ಲೋಪಗಳ ಬಗ್ಗೆ ಚರ್ಚಿಸಬೇಕಿತ್ತು ಅದನ್ನು ಚರ್ಚಿಸಿದ್ದೇನೆ.ನಮಗೆ ಅಸಮಾಧಾನವೂ ಇಲ್ಲ. ನಮ್ಮನ್ನು ಬೆಂಬಲಿಸಿ ಯಾವ ಕಾರ್ಪೋರೇಟರ್ ಗಳು ರಾಜೀನಾಮೆ ನೀಡುವುದಿಲ್ಲ ಎಂದು ಹೇಳಿದರು. ಯಾವ ಬಿಜೆಪಿ ನಾಯಕರು ನನ್ನನ್ನು ಭೇಟಿ ಮಾಡಿಲ್ಲ. ಸತೀಶ್ ರೆಡ್ಡಿ, ಎಂ.ಕೃಷ್ಣಪ್ಪ ಯಾರೂ ಕೂಡಾ ಭೇಟಿ ಮಾಡಿ ಚರ್ಚಿಸಿಲ್ಲ. ಯಲಹಂಕ ಶಾಸಕ ವಿಶ್ವನಾಥ್ ನಮ್ಮ ಮನೆಗೆ ಬಂದಿದ್ದು ನಿಜ.ಆದರೆ ರಾಜಕೀಯ ವಿಚಾರಕ್ಕಲ್ಲ; ಮದುವೆ ಆಹ್ವಾನ ಪತ್ರ ನೀಡಲು ಬಂದಿದ್ದರು ಎಂದು ಸ್ಪಷ್ಟಪಡಿಸಿದರು. ಲೋಕ ಸಭೆ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ. 2019ರ ಲೋಕ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ದೇಶದಲ್ಲಿ ಅಧಿಕಾರಕ್ಕೆ ಬರಬೇಕು ಎಂದರು.
ರಾಮಲಿಂಗಾ ರೆಡ್ಡಿ ಅವರಿಗೆ ಮಂತ್ರಿಗಿರಿ ತಪ್ಪಿದ್ದರಿಂದ ಅವರ ಪುತ್ರಿ ಸೌಮ್ಯಾ ರೆಡ್ಡಿಗೆ ನೀಡಿದ್ದ ಸಂಸದೀಯ ಕಾರ್ಯದರ್ಶಿ ಸ್ಥಾನವನ್ನು ತಿರಸ್ಕರಿಸಿದ್ದರು,  ಬೆಂಗಳೂರಿನಲ್ಲಿ ನಾನೊಬ್ಬನೇ ಪ್ರಭಾವಿ ಶಾಸಕನಲ್ಲ,  ಬೆಂಗಳೂರಿನ ಎಲ್ಲಾ ಶಾಸಕರು ಪ್ರಭಾವಿಗಳೇ, ಎಲ್ಲರೂ ಒಗ್ಗಟ್ಟಾಗಿದ್ದಾರೆ ಎಂದು ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ,. ಮಾಲಿನ್ಯ ನಿಯಂತ್ರಣ ಮಂಡಳಿಗೆ ನೇಮಕವಾಗಿರು ಶಾಸಕ ಡಾ. ಸುಧಾಕರ್ ರೆಡ್ಡಿ ಮತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸಿದ್ದರಾಮಯ್ಯ ಅವರನ್ನು ನಿನ್ನೆ ಭೇಟಿ ಮಾಡಿ ಚರ್ಚೆ ನಡೆಸಿದರು.

About the author

ಕನ್ನಡ ಟುಡೆ

Leave a Comment