ರಾಜಕೀಯ

ಕುಮಾರಸ್ವಾಮಿ ರಾಜೀನಾಮೆ ಹೇಳಿಕೆ ಕೇವಲ ಗಿಮಿಕ್: ಬಿ.ಎಸ್.ಯಡಿಯೂರಪ್ಪ

ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ, ಕುಮಾರಸ್ವಾಮಿ ಮತ್ತೆ ರಾಜೀನಾಮೆ ನೀಡುವ ಮಾತನಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಯಿಸಿರುವ ರಾಜ್ಯ ಬಿಜೆಪಿ ಮುಖ್ಯಸ್ಥ, ಪ್ರತಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ . “ಕುಮಾರಸ್ವಾಮಿ ರಾಜ್ಯ ಕಾಂಗ್ರೆಸ್ ನಾಯಕರನ್ನು ಹೆದರಿಸಲು ಈ ರೀತಿ ಬೆದರಿಕೆ ಹಾಕುತ್ತಾರೆ.ಇದೇನೂ ಹೊಸದಲ್ಲ. ಈ ಹಿಂದೆಯೂ ಈ ರೀತಿಯ ರಾಜೀನಾಮೆ ಕೊಡುವ ಮಾತುಗಳನ್ನು ಹೇಳಿದ್ದರು” ಅವರು ತಿಳಿಸಿದ್ದಾರೆ.
ಪತ್ರಿಕೆಯೊಡನೆ ಮಾತನಾಡಿದ ಯಡಿಯೂರಪ್ಪ ರೆಸಾರ್ಟ್ ನಲ್ಲಿ ಶಾಸಕರ ನಡುವಿನ ಹೊಡೆದಾಟದ ಬಗ್ಗೆ ಪ್ರತಿಕ್ರಯಿಸಿ ಕಂಪ್ಲಿ ಶಾಸಕ ಜೆ.ಎನ್. ಗಣೇಶ್ ಅವರನ್ನು ಬಂಧಿಸಲು ಸರ್ಕಾರ ವಿಫಲವಾಗಿದೆ. ಇದು ರಾಜ್ಯ ಸರ್ಕಾರ ಕೆಲಸ ಮಾಡುವ ರೀತಿಯನ್ನು ಪ್ರತಿಬಿಂಬಿಸುತ್ತಿದೆ.ಶಾಸಕರನ್ನು ರೆಸಾರ್ಟ್ ಗೆ ಕರೆದೊಯ್ದ ನಾಯಕರೇ ಇದಕ್ಕೆ ಜವಾಬ್ದಾರರು.ಅವರನ್ನೇ ಪ್ರಕರಣದಲ್ಲಿ ಸಿಲುಕಿಸಬೇಕು ಎಂದರು. ಬಿಜೆಪಿ ಕಾಂಗ್ರೆಸ್, ಜೆಡಿಎಸ್ ಶಾಸಕರಿಗೆ ಹಣದ ಆಮಿಷ ಒಡ್ಡಿದೆ, ಹಾಗೆಯೇ ಆಪರೇಷನ್ ಕಮಲ ನಡೆಸಲು ತೆರೆಮರೆಯಲ್ಲಿ ಕಸರತ್ತು ನಡೆಸಿದೆ ಎಂಬ ಮಾತುಗಳು ಕುರಿತು ಪ್ರತಿಕ್ರಿಯೆ ನೀಡಿದ ಮಾಜಿ ಮುಖ್ಯಮಂತ್ರಿ “ಎಲ್ಲರಿಗೂ ರೆಸಾರ್ಟ್ ನಲ್ಲಿ ಏನಾಗಿದೆ ಎನ್ನುವುದು ಚೆನ್ನಾಗಿ ಅರಿವಿದೆ.ಡಿ (ಎಸ್) ಮತ್ತು ಕಾಂಗ್ರೆಸ್ ನಾಯಕರು ತಮ್ಮ ವೈಫಲ್ಯಗಳನ್ನು ಮರೆಮಾಡಲಿಕ್ಕಾಗಿ ಆಪರೇಷನ್ ಕಮಲ ಎಂಬ ಹೆಸರನ್ನು ಬಳಸಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್, ಜೆಡಿಎಸ್ ನಲ್ಲಿನ ಬಿರುಕುಗಳಿಗೆ, ಭಿನ್ನಾಭಿಪ್ರಾಯಗಳಿಗೆ ನಾವು ಜವ್ಚಾಬ್ದಾರರಲ್ಲ” ಎಂದಿದ್ದಾರೆ.
ಇನ್ನು ಶಾಸಕರ ಖರೀದಿಗಾಗಿ ಬಿಜೆಪಿ  60 ಕೋಟಿ ರೂ.ಆಫರ್ ನೀಡಿತ್ತು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು “”ಅಂತಹ ಬೃಹತ್ ಮೊತ್ತದ ಹಣವನ್ನು ಆಫರ್ ಮಾಡಲಾಗುತ್ತದೆ ಎಂದು ಯಾರಾದರೂ ನಂಬಲುಇ ಸಾಧ್ಯವೆ?” ಎಂದು ಮರುಪ್ರಶ್ನೆ ಹಾಕಿದ್ದಾರೆ. ಇದೇ ವೇಳೆ ಬಿಜೆಪಿ ಶಾಸಕರು ದೆಹಲಿ ಹಾಗೂ ಗುರುಗ್ರಾಮದಲ್ಲಿ ಸಮಯ ಕಳೆದ ಬಗ್ಗೆ ಹೇಳಿದ ಯಡಿಯೂರಪ್ಪ “”ನಾವು ಪಕ್ಷದ  ಅಧಿವೇಶನಗಳಿಗೆ ಹಾಜರಾಗಲು ರಾಷ್ಟ್ರ ರಾಜಧಾನಿಗೆ ತೆರಳಿದ್ದೆವು.ಅದರ ನಂತರ, ಶಾಸಕರು ಲೋಕಸಭಾ ಚುನಾವಣೆಗೆ ಪಕ್ಷದ ಕಾರ್ಯತಂತ್ರವನ್ನು ಚರ್ಚಿಸಲು ಬಯಸಿದರು ಅದಕ್ಕಾಗಿ ಕೆಲದಿನಗಳ ಹೆಚ್ಚುವರಿ ವಾಸ್ತವ್ಯ ಅಗತ್ಯವಾಯಿತು” ಎಂದಿದ್ದಾರೆ. ಅಲ್ಲದೆ “ನಮ್ಮ ಪಕ್ಷದ ಶಾಸಕರಾರೂ ಪಕ್ಷಾಂತ್ರ ಮಾಡುವುದಿಲ್ಲ. ನಾವು 104 ಶಾಸಕರೂ ಒಗ್ಗಟ್ಟಾಗಿದ್ದೇವೆ” ಎಂದು ಉತ್ತರಿಸಿದ್ದಾರೆ.
2019ರ ಲೋಕಸಭೆ ಚುನಾವಣೆ ಬಳಿಕ ಯಡಿಯೂರಪ್ಪ ಅವರನ್ನು ಬದಿಗೆ ಸರಿಸಲಾಗುತ್ತದೆ ಎಂಬ ಮಾತುಗಳು ಕೇಳುತ್ತಿದೆ ಎಂಬ ಬಗ್ಗೆ ವಿವರಿಸಿದ ಬಿಜೆಪಿ ನಾಯಕ “ಅಂತಹ ಮಾತು, ವದಂತಿಗಳುಸತ್ಯದಿಂದ ದೂರವಾಗಿದೆ.ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ.ನಾವು ನೀಡುವ ಯಾವ ಹೇಳಿಕೆಗಳೂ ಜನರ ಭಾವನೆಗಳಿಗೆ ನೋವುಂಟುಮಾಡಬಾರದು” ಎಂದಿದ್ದಾರೆ.

About the author

ಕನ್ನಡ ಟುಡೆ

Leave a Comment