ಸಿನಿ ಸಮಾಚಾರ

ಕುಮಾರಸ್ವಾಮಿ ಹುಟ್ಟುಹಬ್ಬಕ್ಕೆ ಸೀತಾರಾಮ ಕಲ್ಯಾಣ ತಂಡದಿಂದ ಓ ಜಾನು ಹಾಡಿನ ಕೊಡುಗೆ

ಬೆಂಗಳೂರು: ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರ ಜನ್ಮದಿನಕ್ಕೆ ಮಗ ನಿಖಿಲ್‌ ಕುಮಾರಸ್ವಾಮಿ ನಾಯಕರಾಗಿ ನಟಿಸಿರುವ ‘ಸೀತಾರಾಮ ಕಲ್ಯಾಣ’ ಚಿತ್ರದ 2ನೇ ಹಾಡನ್ನು ಬಿಡುಗಡೆ ಮಾಡಲಾಗಿದೆ.

‘ಓ ಜಾನು..’ ಹಾಡಿನ ಲಿರಿಕಲ್‌ ವೀಡಿಯೋವನ್ನು ಭಾನುವಾರ ಬಿಡುಗಡೆಗೊಳಿಸಲಾಗಿದ್ದು, ಈಗಾಗಲೇ ಸುಮಾರು 3 ಲಕ್ಷ ವ್ಯೂಸ್ ಸಿಕ್ಕಿದೆ. ಕೆ. ಕಲ್ಯಾಣ್‌ ಬರೆದಿರುವ ಹಾಡಿಗೆ ಅನೂಪ್‌ ರೂಬಿನ್ಸ್‌ ಸಂಗೀತ ಸಂಯೋಜಿಸಿದ್ದಾರೆ. ಮೊದಲ ಹಾಡು ‘ನಿನ್ನ ರಾಜ ನಾನು, ನನ್ನ ರಾಣಿ ನೀನು’ ಹಾಡನ್ನು ರಾಜ್ಯದೆಲ್ಲೆಡೆ ಗುನುಗುನಿಸುತ್ತಿದ್ದಾರೆ. ಲಹರಿ ಮ್ಯೂಸಿಕ್‌ನ ಯೂಟ್ಯೂಬ್‌ ಚಾನಲ್‌ನಲ್ಲಿ ಈ ಹಾಡು ಈಗಾಗಲೇ 30 ಲಕ್ಷಕ್ಕೂ ಹೆಚ್ಚು ವ್ಯೂಸ್‌ ಪಡೆದಿದೆ. ಚಿತ್ರದಲ್ಲಿ ರಚಿತಾ ರಾಮ್‌ ನಾಯಕಿ ಪಾತ್ರ ನಿರ್ವಹಿಸುತ್ತಿದ್ದಾರೆ.

ಸಾಮಾಜಿಕ ತಾಣದಲ್ಲಿ ತಂದೆಯ ಜನ್ಮದಿನದ ಬಗ್ಗೆ ಭಾವನಾತ್ಮಕವಾಗಿ ಬರೆದುಕೊಂಡಿರುವ ನಿಖಿಲ್‌ ‘ಆ ದೇವರು ನಿಮಗೆ ಆರೋಗ್ಯ, ನೆಮ್ಮದಿ ಕೊಟ್ಟು ಕಾಪಾಡಲಿ. ಮುಖ್ಯವಾಗಿ ರಾಜ್ಯದ ಜನತೆಗೆ ಸೇವೆ ಮಾಡುವ ನಿಮ್ಮ ಆಶಯಕ್ಕೆ ದೇವರು ಶಕ್ತಿ ಕೊಡಲಿ. ನಿಮ್ಮ ಮಗನಾಗಿ ಹುಟ್ಟಿರುವುದೇ ನನ್ನ ಪುಣ್ಯ’ ಎಂದಿದ್ದಾರೆ.

About the author

ಕನ್ನಡ ಟುಡೆ

Leave a Comment