ರಾಜ್ಯ ಸುದ್ದಿ

ಕುಮಾರ ಬಂಗಾರಪ್ಪ ಮೀ ಟೂ ಎಚ್ಚರಿಕೆ; ಯಾವುದೇ ತಪ್ಪು ಮಾಡಿಲ್ಲವೆಂದ ಸಿಎಂ ತಿರುಗೇಟು

ಉಡುಪಿ: ನಾನು ಯಾವುದೇ ತಪ್ಪು ಮಾಡಿಲ್ಲ. ವೈಯಕ್ತಿಕ ವಿಚಾರದ ಚರ್ಚೆ ಯಾವುದೇ ಮಾಡುವುದಿಲ್ಲ ಎಂದು ಶಾಸಕ ಕುಮಾರ ಬಂಗಾರಪ್ಪ ಅವರ ಮೀ ಟೂ ಎಚ್ಚರಿಕೆಗೆ ಸಿಎಂ ತಿರುಗೇಟು ನೀಡಿದರು.

ಉಡುಪಿಯಲ್ಲಿ ಮಾತನಾಡಿದ ಅವರು ಬಂಗಾರಪ್ಪನ ಮಗನಾಗಿ ಕುಮಾರ್ ಬಂಗಾರಪ್ಪ ಏನು ಮಾಡಿದ್ದಾರೆ? ಜಿಲ್ಲೆ ಹಾಗೂ ರಾಜ್ಯಕ್ಕೆ ಕುಮಾರ ಬಂಗಾರಪ್ಪ ಅವರ ಕೊಡುಗೆ ಏನಿದೆ? ಬಂಗಾರಪ್ಪ ಹೆಸರು ದುರುಪಯೋಗ ಪಡಿಸಿಕೊಂಡು ಮತ ಕೇಳುವ ಅವಶ್ಯಕತೆ ನಮಗಿಲ್ಲ ಎಂದು ತಿರುಗೇಟು ನೀಡಿದ ಸಿಎಂ, ಬಂಗಾರಪ್ಪ ಅವರ ಸ್ಮಾರಕ ನಿರ್ಮಾಣಕ್ಕೆ ಮಧು ಬಂಗಾರಪ್ಪ ಅವರು ವಿನ್ಯಾಸ ತಯಾರು ಮಾಡಿದ್ದಾರೆ ಎಂದು ತಿಳಿಸಿದರು.

ರಾಜಕೀಯ ವಿಚಾರ ಇದ್ದರೆ ಚರ್ಚೆ ಮಾಡೋಣ. ಚುನಾವಣೆ ಸಂದರ್ಭದಲ್ಲಿ ವೈಯಕ್ತಿಕ ವಿಚಾರದ ಬಗ್ಗೆ ಚರ್ಚೆ ಮಾಡುವುದಿಲ್ಲ. ಇದು ಕುಮಾರ ಬಂಗಾರಪ್ಪ ಅವರ ಕೀಳು ಅಭಿರುಚಿಯನ್ನು ತೋರಿಸುತ್ತದೆ. ಅವರ ಆರೋಪದ ಬಗ್ಗೆ ನಾನು ಮಾತನಾಡುವುದಿಲ್ಲ. ಚುನಾವಣೆ ಸಂದರ್ಭ ಅಭಿವೃದ್ಧಿ ವಿಚಾರ ಚರ್ಚೆಯಾಗಲಿ. ನನಗೆ ಎಲ್ಲವನ್ನೂ ಎದುರಿಸುವ ಸಾಮರ್ಥ್ಯ ಇದೆ ಎಂದು ಹೇಳಿದರು.

About the author

ಕನ್ನಡ ಟುಡೆ

Leave a Comment