ರಾಜ್ಯ ಸುದ್ದಿ

ಕೃಷಿಹೊಂಡದಲ್ಲಿ ಮುಳುಗಿ ಮೂವರು ಬಾಲಕರು ಸಾವು: ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ ಡಿಕೆಶಿ, ಉಗ್ರಪ್ಪ

ಬಳ್ಳಾರಿ: ಕೃಷಿಹೊಂಡದಲ್ಲಿ ಮುಳುಗಿ ಮೂವರು ಬಾಲಕರು ಸಾವಿಗೀಡಾಗಿರುವ ಘಟನೆ ಬಳ್ಳಾರಿಯ ಕೊರ್ಲಗುಂದಿ ಗ್ರಾಮದಲ್ಲಿ ಭಾನುವಾರ ನಡೆದಿದ್ದು, ಸಚಿವ ಡಿ.ಕೆ.ಶಿವಕುಮಾರ್​ ಅವರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು.

ಹರ್ಷ(13 ), ಭರತ್(11) ಹಾಗೂ ಎರ್ರಿಸ್ವಾಮಿ(13) ಮೃತ ಬಾಲಕರು. ಮೃತ ಹರ್ಷ ಹಾಗೂ ಭರತ್ ಒಂದೇ ಕುಟುಂಬದವರು. ವಿಮ್ಸ್​ನ ಶವಗಾರಕ್ಕೆ ಸಚಿವ ಡಿಕೆಶಿ ಹಾಗೂ ಉಗ್ರಪ್ಪ ಭೇಟಿ ನೀಡಿ ಅಂತಿಮ ದರ್ಶನ ಪಡೆದು, ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು. ಘಟನೆ ಸಂಬಂಧ ಮೋಕಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About the author

ಕನ್ನಡ ಟುಡೆ

Leave a Comment