ರಾಷ್ಟ್ರ

ಕೃಷ್ಣಮೃಗ ಬೇಟೆ: ಸಲ್ಮಾನ್ ಖಾನ್‌ಗೆ 5 ವರ್ಷ ಜೈಲು

ಜೋಧ್‌ಪುರ: ಕೃಷ್ಣಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ದೋಷಿ ಎಂದು ಜೋಧ್‌ಪುರ ನ್ಯಾಯಾಲಯ ತೀರ್ಪು ನೀಡಿದ್ದು 5 ವರ್ಷ ಜೈಲು ಶಿಕ್ಷೆ, 10 ಸಾವಿರ ರೂ. ದಂಡ ವಿಧಿಸಿದೆ.

ಪ್ರಕರಣದ ಉಳಿದ ಆರೋಪಿಗಳಾದ ಸೈಫ್‌ ಅಲಿ ಖಾನ್‌, ಸೋನಾಲಿ ಬೇಂದ್ರೆ, ಟಬು ಮತ್ತು ನೀಲಂ ಅವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಜೋಧ್‌ಪುರದ ಮುಖ್ಯ ಜ್ಯುಡಿಶಿಯಲ್‌ ಮ್ಯಾಜಿಸ್ಪ್ರೇಟ್‌ ಕೋರ್ಟ್‌ ಸಲ್ಮಾನ್‌ ಖಾನ್‌ ವಿರುದ್ಧದ 20 ವರ್ಷಗಳ ಹಳೆಯ ಕೃಷ್ಣಮೃಗ ಬೇಟೆ ಪ್ರಕರಣದ ತೀರ್ಪನ್ನು ಮಾ.28ಕ್ಕೆ ಪೂರ್ಣಗೊಳಿಸಿದ್ದು, ತೀರ್ಪನ್ನು 5ಕ್ಕೆ ನಿಗದಿಪಡಿಸಿತ್ತು.

‘ರೇಸ್‌ 3’ ಚಿತ್ರಕ್ಕಾಗಿ ಅಬು ಧಾಬಿಗೆ ತೆರಳಿದ್ದ ನಟ ಸಲ್ಮಾನ್‌ ಖಾನ್‌ ಬುಧವಾರ ಮುಂಬಯಿಗೆ ವಾಪಸಾಗಿದ್ದು, ನ್ಯಾಯಾಲಯಕ್ಕೆ ಹಾಜರಾಗಲು ಅಲ್ಲಿಂದ ವಿಶೇಷ ವಿಮಾನದಲ್ಲಿ ಜೋಧ್‌ಪುರಕ್ಕೆ ತೆರಳಿದ್ದರು.

1998ರಲ್ಲಿ ಹಮ… ಸಾಥ್‌ ಸಾಥ್‌ ಹೈ ಸಿನಿಮಾ ಶೂಟಿಂಗ್‌ ವೇಳೆ ಜೋಧಪುರದ ಬಳಿಯಲ್ಲಿರುವ ಕಂಕಣಿ ಗ್ರಾಮದಲ್ಲಿ ಸಲ್ಮಾನ್‌ ಖಾನ್‌ ಕೃಷ್ಣಮೃಗ ಬೇಟೆಯಾಡಿದ್ದರು ಎಂಬ ಆರೋಪಗಳನ್ನು ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಖಾನ್‌ ವಿರುದ್ಧ ವನ್ಯಜೀವಿ ರಕ್ಷ ಣಾ ಕಾಯಿದೆ 51ರ ಅಡಿ 2 ಪ್ರತ್ಯೇಕ ಪ್ರಕರಣಗಳನ್ನು ದಾಖಲಾಗಿತ್ತು. 1998ರ ಸೆಪ್ಟೆಂಬರ್‌ 26, 27ರಂದು ಭಾವಾಡದಲ್ಲಿ ಕೃಷ್ಣಮೃಗ ಕೊಂದಿದ್ದ ಪ್ರಕರಣ, ಹಾಗೂ 1998ರ ಸೆಪ್ಟೆಂಬರ್‌ 28, 29ರಂದು ಮಥಾನಿಯಾದಲ್ಲಿ ಚಿಂಕಾರ ಕೊಂದ ಆರೋಪ ಹೊರಿಸಲಾಗಿತ್ತು.

About the author

ಕನ್ನಡ ಟುಡೆ

Leave a Comment