ಸುದ್ದಿ

ಕೆಂಪಯ್ಯನ ಮುಖವಾಡ ಕಳಚಿ ಬೀಳಲಿದೆಯಾ?

ಬೆಂಗಳೂರು : ಸುಳ್ಳು ಜಾತಿ ಪ್ರಮಾಣಪತ್ರ ನೀಡಿ ಕೆಲಸ ಪಡೆದಿದ್ದಾರೆ ಎಂದು ಕೆಂಪಯ್ಯ ವಿರುದ್ಧ ಎಸಿಬಿಗೆ ದೂರು ಕೊಟ್ಟರೂ ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ದೂರದಾರು ಕೆಂಪಯ್ಯ ವಿರುದ್ಧ ಸಿಬಿಐ ತನಖೆ ನಡೆಸುವಂತೆ ಒತ್ತಾಯ ಮಾಡಿ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ.
ಈ ಸಂಬಂಧಪಟ್ಟಂತೆ 1990 ರಲ್ಲಿ ಪೊಲೀಸ್ ಇಲಾಖೆ ತನಿಖೆ ನಡೆಸಿ ಕೆಂಪಯ್ಯ ನಕಲಿ ಜಾತಿ ಪ್ರಮಾಣ ಪತ್ರ ನೀಡಿ ಐಪಿಎಸ್ ಹುದ್ಧೆ ಪಡೆದಿದ್ದಾರೆ ಎಂದು ಸಾಬೀತು ಮಾಡಿತ್ತು. ಇಲಾಖೆ ವರದಿ ಆಧಾರಿಸಿ ಅಜಯ್ ಕುಮಾರ್ ಸಿಂಗ್ ಕ್ರಮ ಕೈಗೊಳ್ಳುವ ಮುನ್ನ ಕೆಂಪಯ್ಯ ಸ್ವಯಂ ನಿವೃತ್ತಿ ಪಡೆದು ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡಿದ್ದರು. ಆದರೆ ಇದೀಗ ಈ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿದ್ದು ಕೆಂಪಯ್ಯನನ್ನ ಸಿಬಿಐ ಬಲೆಗೆ ಸಿಲುಕಿಸಿ ಶಿಕ್ಷೆ ಕೊಡಿಸಲು ಮುಂದಾಗಿದ್ದಾರೆ.
ಸಿದ್ದರಾಮಯ್ಯನವರ ನೆರಳಿನಲ್ಲು ಗೃಹ ಇಲಾಖೆಯನ್ನು ತನಗೆ ಬೇಕಾದಂತೆ ಬಳಸಿಕೊಂಡಿದ್ದ ಇವರನ್ನು ರಾಮಲಿಂಗರೆಡ್ಡಿ ಗೃಹ ಮಂತ್ರಿಯಾದ ಮೇಲೆ ಹಂತ ಹಂತವಾಗಿ ದೂರವಿಡುತ್ತಿದ್ದಾರೆ ಹಾಗೆಯೇ ಈ ಕೇಸ್ ಏನಾದರೂ ಸಿಬಿಐಗೆ ವರ್ಗವಾದರೆ ಕೆಂಪಯ್ಯನವರಿಗೆ ಶನಿ  ಕಾಟ ಖಚಿತ.

About the author

ಕನ್ನಡ ಟುಡೆ

Leave a Comment