ರಾಷ್ಟ್ರ ಸುದ್ದಿ

ಕೆಂಪು ಕೋಟೆಯಲ್ಲಿ ರಾಹುಲ್ ಗಾಂಧಿ ತ್ರಿವರ್ಣ ಧ್ವಜ ಹಾರಿಸಲಿದ್ದಾರೆ: ಸಿಧು

ನವದೆಹಲಿ: ಭವಿಷ್ಯದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಕೆಂಪು ಕೋಟೆಯಲ್ಲಿ ತ್ರಿವರ್ಣ ಧ್ವಜ ಹಾರಿಸಲಿದ್ದಾರೆಂದು ಪಂಜಾಬ್ ರಾಜ್ಯ ಸಚಿವ ನವಜೋತ್ ಸಿಂಗ್ ಸಿಧು ಅವರು ಬುಧವಾರ ಹೇಳಿದ್ದಾರೆ.
ಪಂಚರಾಜ್ಯಗಳ ವಿಧಾನಸಭಾ ಚುನಾವಣೆಗಳ ಪೈಕಿ ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿರುವ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಭವಿಷ್ಯದಲ್ಲಿ ರಾಹುಲ್ ಗಾಂಧಿಯವರು ಕೆಂಪುಕೋಟೆಯಲ್ಲಿ ತ್ರಿವರ್ಣ ಧ್ವಜ ಹಾರಿಸುವ ವಿಶ್ವಾಸ ನನಗಿದೆ ಎಂದು ಹೇಳಿದ್ದಾರೆ. ರಾಜಸ್ಥಾನ, ಛತ್ತೀಸ್ಗಢ ಹಾಗೂ ಮಧ್ಯಪ್ರದೇಶದಲ್ಲಿ ಗೆಲವು ಸಾಧಿಸಿದ ಕೂಡಲೇ ಕೂಡಲೇ ನಮಗೆ ಸಂತೃಪ್ತಿ ದೊರತಿಲ್ಲ. ರಾಹುಲ್ ಅವರು ರೈತರು, ಯುವಕರು ಹಾಗೂ ಬಡವರಿಗಾಗಿ ಹೋರಾಟ ಮಾಡಿದ್ದರು. ಬರಡಾಗಿದ್ದ ಮಣ್ಣಿನ ಮೇಲೆ ಇದೀಗ ಸಂತಸ ಮಳೆ ಬಂದಂತಾಗಿದೆ. ಈ ಸಂತೋಷ ಕೋಟ್ಯಾಂತರ ಕಾಂಗ್ರೆಸ್ ಕಾರ್ಯಕರ್ತರಿಗೂ ಇದೆ. ಒಂದು ಗೆಲುವು ಇಡೀ ನಕ್ಷೆಯನ್ನು ಬದಲಾಯಿಸಬರುದು. ಪ್ರಸ್ತುತ ನಾವು ಮೂರು ರಾಜ್ಯಗಳಲ್ಲಿ ಗೆಲವು ಸಾಧಿಸಿದ್ದೇವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಗೆಲುವು ಸಾಧಿಸುತ್ತೇವೆಂದು ತಿಳಿಸಿದ್ದಾರೆ.

About the author

ಕನ್ನಡ ಟುಡೆ

Leave a Comment