ರಾಜ್ಯ ಸುದ್ದಿ

ಕೆಇಆರ್‌ಸಿ ನೂತನ ಅಧ್ಯಕ್ಷರಿಂದ ಅಧಿಕಾರ ಸ್ವೀಕಾರ

ಬೆಂಗಳೂರು: ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ(ಕೆಇಆರ್‌ಸಿ)ದ ನೂತನ ಅಧ್ಯಕ್ಷರಾಗಿ ನಿವೃತ್ತ ಐಎಎಸ್‌ ಅಧಿಕಾರಿ ಶಂಭು ದಯಾಳ್‌ ಮೀನಾ ಮಂಗಳವಾರ ಅಧಿಕಾರ ಸ್ವೀಕರಿಸಿದರು.

ಸೋಮವಾರವಷ್ಟೇ ಸರಕಾರದಿಂದ ನೇಮಕವಾಗಿದ್ದ ಮೀನಾ ಅವರು ಮುಖ್ಯ ಕಾರ್ಯದರ್ಶಿಯನ್ನು ಭೇಟಿ ಮಾಡಿ ಕರ್ತವ್ಯಕ್ಕೆ ಹಾಜರಾಗುವ ಇಂಗಿತ ವ್ಯಕ್ತಪಡಿಸಿದ್ದರು. ಅದರಂತೆ ಅವರು ವಸಂತನಗರದಲ್ಲಿರುವ ಆಯೋಗದ ಕಚೇರಿಗೆ ಆಗಮಿಸಿ ಕರ್ತವ್ಯಕ್ಕೆ ಹಾಜರಾದರು. ಕಚೇರಿಯ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಪರಿಚಯ ಮಾಡಿಕೊಂಡು ಮೊದಲ ದಿನದ ಕರ್ತವ್ಯವನ್ನು ನಿಭಾಯಿಸಿದರು. ಡಿ.19ರಂದು ಅಧ್ಯಕ್ಷ ಸ್ಥಾನದಿಂದ ನಿವೃತ್ತರಾದ ಶಂಕರಲಿಂಗೇಗೌಡ ಸ್ಥಾನಕ್ಕೆ ಮೀನಾರನ್ನು ಸರಕಾರ ನೇಮಿಸಿದೆ.

About the author

ಕನ್ನಡ ಟುಡೆ

Leave a Comment