ಸಿನಿ ಸಮಾಚಾರ

ಕೆಜಿಎಫ್ ಅಬ್ಬರ: ಬಾಕ್ಸ್ ಆಫೀಸ್‌ನಲ್ಲಿ ಜೀರೋ ಹಿಂದಿಕ್ಕಿದ ಕೆಜಿಎಫ್, ಮೊದಲ ದಿನ ಕಲೆಕ್ಷನ್ ಎಷ್ಟು ಕೋಟಿ

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರದ ದೇಶಾದ್ಯಂತ ಧೂಳೆಬ್ಬಿಸುತ್ತಿದ್ದು ಅಭಿಮಾನಿಗಳಿಗೆ ರಸದೌತಣ ನೀಡುತ್ತಿದೆ. ವಿಮರ್ಶಕರಿಂದಲೂ ಸಕಾರಾತ್ಮಕ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.
ಈಗ ಏನಿದ್ರೂ ಚಿತ್ರದ ಫಸ್ಟ್ ಡೇ ಕಲೆಕ್ಷನದ್ದೇ ಮಾತು. ಭಾರತೀಯ ಚಿತ್ರರಂಗದಲ್ಲೇ ಕನ್ನಡ ಚಿತ್ರವೊಂದು ಈ ಪಾಟಿ ಸದ್ದು ಮಾಡುತ್ತಿರುವುದು ನಿಜಕ್ಕೂ ದಾಖಲೆ. ಇನ್ನು ಮೊದಲ ದಿನದ ಬಾಕ್ಸ್ ಆಫೀಸ್ ನಲ್ಲಿ ಕೆಜಿಎಫ್ ಚಿತ್ರ ಬಾಚಿಕೊಂಡಿದ್ದು ಎಷ್ಟು ಕೋಟಿ ಎಂಬುದು ಇಲ್ಲಿದೆ ನೋಡಿ. ಇಡೀ ದೇಶಾದ್ಯಂತ ಕೆಜಿಎಫ್ ಚಿತ್ರ 2460 ಸ್ಕ್ರೀನ್ ಗಳಲ್ಲಿ ಬಿಡುಗಡೆಯಾಗಿದೆ. ಜೊತೆಗೆ ಕೆಲಕ್ಷನ್ ನಲ್ಲೂ ಚಿತ್ರ ಹಿಂದೆ ಬಿದ್ದಿಲ್ಲ. ಮೂಲಗಳ ಪ್ರಕಾರ ಇಡೀ ದೇಶಾದ್ಯಂತ ಕೆಜಿಫ್ ಚಿತ್ರ 30 ಕೋಟಿ ರುಪಾಯಿ ಗಳಿಸಿದೆಯಂತೆ. ಇದರಲ್ಲಿ ಕರ್ನಾಟಕದಿಂದಲೇ 15 ಕೋಟಿ ರುಪಾಯಿ ಹರಿದು ಬರಲಿದೆಯಂತೆ.
ಇನ್ನು ಶಾರುಖ್ ಖಾನ್ ಅಭಿನಯದ ಜೀರೋ ಚಿತ್ರ ಸಹ ಇಂದೇ ಬಿಡುಗಡೆಯಾಗಿದ್ದು ಬಾಲಿವುಡ್ ನಲ್ಲಿ ಯಶ್ ಚಿತ್ರಕ್ಕೆ ಜೀರೋ ಪೈಪೋಟಿ ಕೊಡುತ್ತದೆ ಅಂತ ಹೇಳಲಾಗುತ್ತಿತ್ತು ಆದರೆ ಜೀರೋ ಚಿತ್ರ ದೇಶಾದ್ಯಂತ ಬರೀ 25 ಕೋಟಿ ಗಳಿಸುವಲ್ಲಿ ಶಕ್ತವಾಗಿದೆ ಎನ್ನುತ್ತವೆ ಮೂಲಗಳು. ಸದ್ಯದ ಬಾಕ್ಸ್ ಆಫೀಸ್ ಕಲೆಕ್ಷನ್ ಲೆಕ್ಕಾಚಾರಗಳು ಥಿಯೇಟರ್ ಗಳಲ್ಲಿ ಬುಕ್ ಹಾಕಿರುವ ಟಿಕೆಟ್ ಗಳ ಲೆಕ್ಕಾಚಾರದ ಮೇಲೆ ಬಂದಿದೆ. ಇನ್ನು ಅಧಿಕೃತ ಮಾಹಿತಿ ನಾಳೆ ಸಿಗಲಿದೆ.

About the author

ಕನ್ನಡ ಟುಡೆ

Leave a Comment