ಸಿನಿ ಸಮಾಚಾರ

ಕೆಜಿಎಫ್ ನ ಪ್ರತಿ ಸನ್ನಿವೇಶ ಚಿತ್ರೀಕರಿಸುವಾಗಲು, 40 ಕೆಜಿ ತೂಕದ ಕ್ಯಾಮೆರಾ ನನ್ನ ಹೆಗಲ ಮೇಲಿತ್ತು: ಭುವನ್ ಗೌಡ

ಬೆಂಗಳೂರು: ಕೆಜಿಎಫ್ ಟೀಸರ್ ಬಿಡುಗಡೆಯಾಗಿದ್ದು, ಸಿನಿಮಾಟೋಗ್ರಾಫರ್ ಭುವನ್ ಗೌಡ ಪ್ರಮುಖ ಕೇಂದ್ರ ಬಿಂದುವಾಗಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಸಿನಿಮಾದಲ್ಲಿ ಯಶ್ ನಟಿಸಿದ್ದು, ಟೆಕ್ನಿಶಿಯನ್ ಗಳ ಕೆಲ ಅತ್ಯದ್ಭುತವಾಗಿದೆ.
ಈ ಪ್ರಾಜೆಕ್ಟ್ ಗಾಗಿ ಸುಮಾರೂ ಎರಡೂವರೆ ವರ್ಷ ಕೆಲಸ ಮಾಡಿದ್ದಾರೆ, 6ರಿಂದ 8 ತಿಂಗಳ ಕಾಲ ಹೊಗೆ, ದೂಳು, ಬೆಂಕಿಯಲ್ಲಿ ಕೆಲಸ ಮಾಡಿದ್ದಾರೆ. ಫೋಟೋಗ್ರಾಫರ್ ಆಗಿದ್ದ ಭುವನ್ ಗೌಡ ಕೆಜಿಎಫ್ ಸಿನಿಮಾದ ಅದ್ಭುತ ಛಾಯಾಗ್ರಾಹಣದಿಂದ ಎಲ್ಲೆಡೆ ಮನೆ ಮಾತಾಗಿದ್ದಾರ. ಜಿಎಫ್ ಸಿನಿಮಾದ ಪ್ರತಿಯೊಂದು ಸನ್ನಿವೇಶವನ್ನು ಚಿತ್ರೀಕರಿಸುವಾಗ 40 ಕೆಜಿ ತೂಕದ ಕ್ಯಾಮೆರಾವನ್ನು ಹೆಗಲ ಮೇಲೆ ಹೊತ್ತುಕೊಂಡೇ ಚಿತ್ರೀಕರಿಸಿದ್ದೇನೆ, ಕೆಲವು ಸನ್ನಿವೇಶಗಳು ಮಬ್ಬುಗೊಂಡಿದ್ದವು, ಅದು ಸಿನಿಮಾಗೆ ಅವಶ್ಯಕತೆಯಿತ್ತು, ಕೆಲವೊಂದು ಬಾರಿ ಹೆಗಲ ಮೇಲೆ ಕ್ಯಾಮೆರಾ ಹೊತ್ತಿಕೊಂಡು ಓಡಿದ್ದೇನೆ, ಉದ್ದನೆಯ ಸನ್ನಿವೇಶಗಳ ಚಿತ್ರೀಕರಣ ಸಮಯದಲ್ಲಿ ನನಗೆ ಗಾಯಗಳಾಗಿದ್ದವು, ಆದರೆ ಆ ನೋವು ತುಂಬಾ ಮೌಲ್ಯಯುತವಾದದ್ದು.
ಭುವನ್ ಆರಿ ಅಲೆಕ್ಸಾ ಎಸ್ ಎಕ್ಸ್ ಟಿ ಪ್ಯಾಂಟಮ್ ಕ್ಯಾಮೆರಾ ಬಳಸುತ್ತಾರೆ. ಏರಿಯಲ್ ಶಾಟ್ ತೆಗೆಯುವಾಗ ನಾವು ಜಿಮ್ಮಿ ಜಿಬ್ ಬಳಸಿಲ್ಲ,  ನನ್ನ ಸ್ವಂತ ಡ್ರೋಣ್ ಬಳಸಿದ್ದೇನೆ. ಅದನ್ನು ನಾನು ಆಪರೇಟ್ ಮಾಡಿದ್ದೇನೆ ಎಂದು ಭುವನ್ ಹೇಳಿದ್ದಾರೆ.

About the author

ಕನ್ನಡ ಟುಡೆ

Leave a Comment