ಸಿನಿ ಸಮಾಚಾರ

ಕೆಜಿಎಫ್ ಹವಾ ನೋಡಲು ಅಣ್ಣನೇ ಇಲ್ಲ, ಮಿಸ್ ಯು ಅಣ್ಣಾ ಎಂದ ರಾಕಿಂಗ್ ಸ್ಟಾರ್

ದೇಶಾದ್ಯಂತ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿರುವ ಕೆಜಿಎಫ್ ಚಿತ್ರದ ಸಂಭ್ರಮವನ್ನು ನೋಡಲು ಅಣ್ಣನೇ ಇಲ್ಲ ಎಂದು ರಾಕಿಂಗ್ ಸ್ಟಾರ್ ಯಶ್ ಅವರು ರೆಬೆಲ್ ಸ್ಟಾರ್ ಅಂಬರೀಶ್ ಅವರನ್ನು ನೆನೆದು ಭಾವುಕರಾಗಿದ್ದಾರೆ.
ಸ್ಯಾಂಡಲ್ವುಡ್ ದಿಗ್ಗಜ, ಅಜಾತಶತ್ರು ಅಂಬರೀಶ್ ಅವರನ್ನು ಯಶ್ ನೆನಪಿಸಿಕೊಂಡಿದ್ದಾರೆ. ಕೆಜಿಎಫ್ ಚಿತ್ರ ಬಿಡುಗಡೆಗೊಂಡು ಎಲ್ಲೆಡೆ ಇತಿಹಾಸ ಸೃಷ್ಟಿಸಲಿ ಎಂದು ಟ್ರೈಲರ್ ರಿಲೀಸ್ ದಿನದಂದು ಸ್ವತಃ ಅಂಬರೀಶ್ ಶುಭ ಕೋರಿದ್ದರು. ಆದರೆ ಸಿನಿಮಾ ಬಿಡುಗಡೆಗೂ ಮುನ್ನ ಅಣ್ಣಾ ಎಲ್ಲರನ್ನು ಅಗಲಿದ್ದರು. ಒಂದು ವೇಳೆ ಇಂದು ಅಂಬಿ ನಮ್ಮ ನಡುವೆ ಇದ್ದಿದ್ದರೆ ಕೆಜಿಎಫ್ ಚಿತ್ರದ ಯಶಸ್ಸು ನೋಡಿ ಎಷ್ಟು ಹರಸುತ್ತಿದ್ದರೋ ಹೇಳಲು ಪದಗಳು ಸಿಗುತ್ತಿರಲಿಲ್ಲ. ಇದೇ ಕಾರಣಕ್ಕೆ ರಾಕಿಂಗ್ ಸ್ಟಾರ್ ಯಶ್ ಹಿರಿಯಣ್ಣನನ್ನು ನೆನಪಿಸಿಕೊಂಡಿದ್ದಾರೆ. ತಮ್ಮ ಟ್ವೀಟರ್ ನಲ್ಲಿ ಮಿಸ್ ಯೂ ಅಣ್ಣಾ ಅಂತಾ ಬರೆದುಕೊಳ್ಳುವ ಮೂಲಕ ಅಂಬರೀಶ್ ಅವರ ಮೇಲಿನ ಅಭಿಮಾನ ಮೆರೆದಿದ್ದಾರೆ.

About the author

ಕನ್ನಡ ಟುಡೆ

Leave a Comment