ರಾಜ್ಯ ಸುದ್ದಿ

ಕೆಪಿಎಸ್‌ಸಿ ಪರೀಕ್ಷೆಗಳು ಫೆ.1ಕ್ಕೆ ಮುಂದೂಡಿಕೆ

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗವು ಜ.22ರಂದು ನಡೆಸಬೇಕಾಗಿದ್ದ 2018ನೇ ಸಾಲಿನ ದ್ವಿತೀಯ ಅಧಿವೇಶನದ ಇಲಾಖಾ ಪರೀಕ್ಷೆಗಳನ್ನು ಫೆ.1ಕ್ಕೆ ಮುಂದೂಡಲಾಗಿದೆ. ತುಮಕೂರಿನ ಸಿದ್ಧಗಂಗಾಮಠದ ಶ್ರೀ ಶಿವಕುಮಾರ ಸ್ವಾಮೀಜಿ ಲಿಂಗೈಕ್ಯವಾಗಿರುವುದರಿಂದ ಅವರ ಗೌರವಾರ್ಥವಾಗಿ ರಾಜ್ಯ ಸರ್ಕಾರ ಜ.22ರಂದು ರಜೆ ಘೋಷಿಸಿತ್ತು. ಹೀಗಾಗಿ,ಮಂಗಳವಾರ ನಡೆಯಬೇಕಿದ್ದ ಇಲಾಖಾ ಪರೀಕ್ಷೆಗಳನ್ನು ಮುಂದೂಡಿದ್ದು, ಫೆ.1ರಂದು ನಡೆಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

About the author

ಕನ್ನಡ ಟುಡೆ

Leave a Comment