ರಾಜಕೀಯ

ಕೆಪಿಜೆಪಿಗೆ ಉಪೇಂದ್ರ ಗುಡ್ ಬೈ ಸದ್ಯದಲ್ಲೆ ಹೊಸ ಪಕ್ಷ ಸ್ಥಾಪನೆ.

ಬೆಂಗಳೂರು: ನಟ ಉಪೇಂದ್ರರವರು “ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ”ಕ್ಕೆ ರಾಜೀನಾಮೆ  ಕೊಟ್ಟಿದ್ದೆನೆ. ಕೆಪಿಜೆಪಿಗೂ ನನ್ನಗೂ ಯಾವುದೇ ಸಂಬಂಧವಿಲ್ಲ.ನಾವೆಲ್ಲರೂ ಸೇರಿ ಒಮ್ಮತದ ತೀರ್ಮಾನಕ್ಕೆ ಬಂದಿರುವುದಾಗಿ ನಟ ಉಪೇಂದ್ರ ಇಂದು ಘೋಷಿಸಿದ್ದಾರೆ.

ಇಂದು ರುಪ್ಪೀಸ್ ರೆಸಾರ್ಟ್ ನಲ್ಲಿ ಬೆಂಬಲಿಗರ ಜತೆ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು ಇವರನ್ನೆಲ್ಲಾ ಸೇರಿಸಿಕೊಂಡು ಕೂಡಲ್ಲೆ ಹೊಸ ಪಕ್ಷ ಸ್ಥಾಪನೆ ಮಾಡುತ್ತೇವೆ. ಇದೇ ಪ್ರಜಾಕೀಯ ಉದ್ದೇಶ ಇಟ್ಟುಕೊಂಡು ಹೊಸ ಪಕ್ಷ ಸ್ಥಾಪನೆ ಮಾಡುವುದಾಗಿ ಹೇಳಿದರು.

ಕೆಪಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ಗೌಡ ಹಾಗೂ ಉಪೇಂದ್ರ ನಡುವೆ ಸೀಟು ಹಂಚಿಕೆ ವಿಷಯದಲ್ಲಿ ಭಿನ್ನಾಭಿಪ್ರಾಯ ಮೂಡಿತ್ತು. ಈ ಹಿನ್ನೆಲೆಯಲ್ಲಿ ಸೋಮವಾರ ಮಹೇಶ್ ಗೌಡ ಹಾಗೂ ಉಪೇಂದ್ರ ಪತ್ರಿಕಾಗೋಷ್ಠಿ ನಡೆಸಿದ್ದರು ಎಂದು ತಿಳಿದು ಬಂದಿದೆ.

About the author

ಕನ್ನಡ ಟುಡೆ

Leave a Comment