ಸುದ್ದಿ

ಕೆರೆಯಂತಾದ ದಾವಣಗೆರೆ ಆಸ್ಪತ್ರೆ, ಬಸ್ ನಿಲ್ದಾಣ: ವರುಣನ ಆರ್ಭಟಕ್ಕೆ ನಲುಗಿದ ನಗರ

ದಾವಣಗೆರೆಯಲ್ಲಿ ಭರ್ಜರಿ ಮಳೆ, ತಗ್ಗು ಪ್ರದೇಶದಲ್ಲಿ ರಸ್ತೆ ಸಂಚಾರ ಬಂದ್, ರಾಜ ಕಾಲುವೆ ಸನಿಹದ ಕಾರು ಗಳು ನೀರಲ್ಲಿ ಮುಳುಗಡೆ, ತಗ್ಗು ಪ್ರದೇಶದಲ್ಲಿ ಜನ ಜೀವನ ಅಸ್ತವ್ಯಸ್ತ, ಅಡುಗೆ ಇತರೆ ವಸ್ತುಗಳು ನೀರು ಪಾಲು.

ಇದೀಗ ಇಡೀ ಊರಿನ ವಿದ್ಯುತ್ ಪೂರೈಕೆ ಸ್ಥಗಿತ. ಎಪಿಎಂಸಿ ಬಳಿಯ ರೈಲ್ವೆ ಕೆಳಸೇತುವೆ ಬಳಿ ಲಾರಿ, ಕಾರು ಮಳೆನೀರಿಗೆ ಸಿಕ್ಕಿ ಹಾಕಿಕೊಂಡಿರುವುದು. ಹಾಗೂ ನಂದಿ ಪೆಟ್ರೋಲ್ ಬಂಕ್ ಎದುರಿನಿಂದಲೇ ಟ್ರಾಫಿಕ್ ಜಾಮ್ ಆಗಿರುವುದು. ಆವರಗೆರೆಗೆ ಹೋಗುವವರು ಅನಿವಾರ್ಯವಾಗಿ ಹದಡಿ ರಸ್ತೆ ಬೈಪಾಸ್ ಮೂಲಕ ಹೋಗಬೇಕು. ಡಿಸಿಎಂ ರೈಲ್ವೆ ಕೆಳಸೇತುವೆಯಲ್ಲಿ ಓಡಾಟ ಸ್ಥಗಿತಗೊಂಡ ಬಗ್ಗೆ ತಿಳಿದುಬಂದಿದೆ.

About the author

ಕನ್ನಡ ಟುಡೆ

Leave a Comment