ರಾಜ್ಯ ಸುದ್ದಿ

ಕೆ.ಎಸ್. ಈಶ್ವರಪ್ಪಗೆ ಜಾಮೀನು ರಹಿತ ವಾರಂಟ್

ಬೆಂಗಳೂರು: ಕ್ರಿಮಿನಲ್ ಪ್ರಕರಣವೊಂದರಲ್ಲಿ ವಿಚಾರಣೆಗಾಗಿ ನ್ಯಾಯಾಲಯಕ್ಕೆ ಹಾಜರಾಗದೆ ಪದೇ ಪದೇ ಗೈರಾಗಿರುವ ಶಾಸಕ, ಬಿಜೆಪಿ ಮುಖಂಡ ಕೆ.ಎಸ್. ಈಶ್ವರಪ್ಪ ಅವರಿಗೆ ಬೆಂಗಳೂರು ನ್ಯಾಯಾಲಯ ಜಾಮೀನು ರಹಿತ ವಾರಂಟ್ ಜಾರಿಗೆ ಆದೇಶಿಸಿದೆ.
ಬೆಂಗಳೂರು ವಿಚಾರಣಾಧೀನ ನ್ಯಾಯಾಲಯ ವಾರಂಟ್ ಜಾರಿಗಾಗಿ ಆದೇಶಿಸಿದ್ದು ಸಿಟಿ ಸಿವಿಲ್ ಕೋರ್ಟ್ ವಿಶೇಷ ನ್ಯಾಯಾಲಯದಿಂದ ಈ ಆದೇಶ ಬಂದಿದೆ. ಈಶ್ವರಪ್ಪ ಮುಂದಿನ ನವೆಂಬರ್ 24ಕ್ಕೆ ವಿಚಾರಣೆಗಾಗಿ ನ್ಯಾಯಾಲಯಕ್ಕೆ ಖುದ್ದು ಹಾಜರಾಗಬೇಕು ಎಂದು ಕೋರ್ಟ್ ಹೇಳಿದೆ.2011ರ ಸಮಯ ಯಡಿಯೂರಪ್ಪ ಅಧಿಕಾರ ಕಳೆದುಕೊಂಡಿದ್ದ ವೇಳೆ ಈಶ್ವರಪ್ಪ ಕರ್ನಾಟಕ ಬಂದ್ ಗೆ ಕರೆ ನೀಡಿದ್ದರು. ಇದನ್ನು ಪ್ರಶ್ನಿಸಿ ಹೈಕೋರ್ಟ್ ವಕೀಲರಾದ ಧರ್ಮಪಾಲ್ ಖಾಸಗಿ ದೂರು ದಾಖಲಿಸಿದ್ದರು.ಈ ಸಂಬಂಧ ವಿಚಾರಣೆ ನಡೆಸಿದ ನ್ಯಾಯಾಲಯ ಇದೀಗ ಈಶ್ವರಪ್ಪ ಅವರಿಗೆ  ವಾರಂಟ್ ಜಾರಿಗೊಳಿಸಲು ಹೇಳಿ ಅವರು ವಿಚಾರಣೆಗೆ ಹಾಜರಾಗುವುದನ್ನು ಕಡ್ಡಾಯ ಮಾಡಿದೆ.

About the author

ಕನ್ನಡ ಟುಡೆ

Leave a Comment