ರಾಜಕೀಯ

ಕೆ.ಎಸ್.ಈಶ್ವರಪ್ಪ ಅವರ ಪುತ್ರ ಹಾಗೂ ಸೊಸೆ ವಿರುದ್ಧ ದೂರು

ಶಿವಮೊಗ್ಗ: ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ ಅವರ ಪುತ್ರ ಕೆ.ಇ.ಕಾಂತೇಶ್ ಹಾಗೂ ಸೊಸೆ ಶಾಲಿನಿ ನಿರ್ದೇಶಕರಾಗಿರುವ ಕಂಪನಿಯೊಂದರ ಮೂಲಕ ಅಕ್ರಮವಾಗಿ ಕೋಟ್ಯಂತರ ರೂಪಾಯಿ ವ್ಯವಹಾರ ನಡೆದಿದೆ ಎಂದು ವಕೀಲರಾದ ಆರ್.ಟಿ.ಐ.ಕಾರ್ಯಕರ್ತ ವಿನೋದ್ ಅವರು ಬೆಂಗಳೂರಿನಲ್ಲಿರುವ ಎಸಿಬಿ ಕೇಂದ್ರ ಕಚೇರಿಗೆ ದೂರು ನೀಡಿದ್ದಾರೆ.

ಈಶ್ವರಪ್ಪ ಪುತ್ರ ಕೆ.ಇ.ಕಾಂತೇಶ್ ಮತ್ತು ಸೊಸೆ ಶಾಲಿನಿ ನಿರ್ದೇಶಕರಾಗಿರುವ ಭರಣಿ ಪವರ್ ಪ್ರೈವೆಟ್ ಲಿಮಿಟೆಡ್ ಕಂಪನಿ 2010ರಲ್ಲಿ ಕಂಪೆನಿ ಕಾಯ್ದೆ ಅನುಸಾರ ನೋಂದಣಿ ಆಗಿದ್ದು, ಇದು 2,76,250 ಷೇರುಗಳನ್ನು ಹೊಂದಿತ್ತು. ಆದರೆ 10 ಮುಖಬೆಲೆಯ ಈ ಷೇರುಗಳನ್ನು 190 ರೂಪಾಯಿ ಪ್ರೀಮಿಯಂ ಮೊತ್ತ ಸೇರಿಸಿ 200 ರೂ.ಗೆ ಮಾರಾಟ ಮಾಡಿದ್ದಾರೆ.

ಪಶ್ವಿಮ ಬಂಗಾಳದ 9 ನಕಲಿ ಕಂಪನಿಗಳು ಈ ಷೇರುಗಳನ್ನು ಖರೀದಿಸಿ ಲಾಭಗಳಿಸಿವೆ.ಈ ಷೇರುಗಳನ್ನು ಖರೀದಿಸಿ ಲಾಭಗಳಿಸಿವೆ ಈ ಕುರಿತು ತನಿಖೆ ನಡೆಸಬೇಕೆಂದು ಆರ್.ಟಿ.ಐ ಕಾರ್ಯಕರ್ತ ವಿನೋದ್ ಅವರು ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ ಅವರ ಪುತ್ರ ಕೆ.ಇ.ಕಾಂತೇಶ್ ಹಾಗೂ ಸೊಸೆ ಶಾಲಿನಿ ವಿರುದ್ಧ ಎಸಿಬಿ ಕೇಂದ್ರ ಕಚೇರಿಗೆ ದೂರು ನೀಡಿದ್ದಾರೆ.ಈ ದೂರನ್ನು ಈಗ ಪೂರ್ವ ವಲಯ ಎಸಿಬಿ ಎಸ್.ಪಿ ಕಚೇರಿಗೆ ವರ್ಗಾಯಿಸಲಾಗಿದೆ ಎಂದು ತಿಳಿದು ಬಂದಿದೆ.

About the author

ಕನ್ನಡ ಟುಡೆ

Leave a Comment