ಸಿನಿ ಸಮಾಚಾರ

ಕೆ.ಜಿ.ಎಫ್.​ ಮೂರನೇ ದಿನಕ್ಕೆ 60 ಕೋಟಿ ಗಳಿಕೆ: ತಮಿಳು ನೆಲದಲ್ಲಿ ಭರ್ಜರಿ ಓಟ

ಬೆಂಗಳೂರು: ಯಶ್​ ಅಭಿನಯದ “ಕೆ.ಜಿ.ಎಫ್​. ಚಾಪ್ಟರ್​ 1” ಚಿತ್ರ ಮೂರನೇ ದಿನಕ್ಕೆ 22.4 ಕೋಟಿ ರೂ. ಗಳಿಸಿದೆ. ಒಟ್ಟು 5 ಭಾಷೆಗಳಲ್ಲಿ ಬಿಡುಗಡೆಯಾದ ಚಿತ್ರ ಹಿಂದಿಯಲ್ಲಿ ಮೂರನೇ ದಿನ ಅಂದರೆ ಭಾನುವಾರ 4.1 ರೂ.ಗಳಿಕೆ ಕಂಡಿದೆ. ಮೂರು ದಿನದಲ್ಲಿ ಕೆ.ಜಿ.ಎಫ್​.ನ ಒಟ್ಟು ಗಳಿಕೆಯ ಮೊತ್ತ 59.61 ಕೋಟಿ ರೂ. ಆಗಿದೆ.

ಚಿನ್ನದ ಗಣಿಯ ಕಥೆಯನ್ನೊಳಗೊಂಡ ಪ್ರಶಾಂತ್​ ನೀಲ್​ ನಿರ್ದೇಶನ ಕೆ.ಜಿ.ಎಫ್.​ ಚಲನಚಿತ್ರ ಡಿ.21ರಂದು ಬಿಡುಗಡೆಯಾಗಿ ಮೊದಲ ದಿನವೇ 18.1 ಕೋಟಿ ರೂಪಾಯಿ ಹಾಗೂ ಎರಡನೇ ದಿನ 19.2 ಕೋಟಿ ರೂ. ಸಂಗ್ರಹವಾಗಿತ್ತು. ಈ ವಾರ ಇನ್ನೂ ಏರಿಕೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ.

ಕೆ.ಜಿ.ಎಫ್. ಸಿನಿಮಾ ದಿನದಿಂದ ದಿನಕ್ಕೆ ಉತ್ತಮ ಪ್ರದರ್ಶನ ಕಾಣುತ್ತಿದೆ ಎಂದು ಟ್ವೀಟ್​ ಮಾಡಿರುವ ಬಾಲಿವುಡ್​ ಟ್ರೆಂಡ್ ವಿಮರ್ಶಕ ತರಣ್​ ಆದರ್ಶ್​ ಅವರು, ಸಿನಿಮಾದ ಮೂರು ದಿನಗಳ ಆದಾಯವನ್ನು ತಿಳಿಸಿದ್ದಾರೆ.

About the author

ಕನ್ನಡ ಟುಡೆ

Leave a Comment