ರಾಜ್ಯ ಸುದ್ದಿ

ಕೇಂದ್ರದ ಪಾಲಿಸಿ ರೈತಾಪಿ, ಕಾರ್ಮಿಕ ವರ್ಗಕ್ಕೆ ಮಾರಕ: ಕ್ಲೆಮೆಟ್ ಕ್ಸೇವಿಯರ್ ದಾಸ್

ಉಡುಪಿ: ಪ್ರಧಾನಿ ನರೇಂದ್ರ  ನೇತೃತ್ವದ ಕೇಂದ್ರದ ಪಾಲಿಸಿ ರೈತಾಪಿ, ಕಾರ್ಮಿಕ  ವರ್ಗಕ್ಕೆ ಮಾರಕವಾಗಿದ್ದು, ಸರಕಾರದ ಈ ಜನವಿರೋಧಿ ನೀತಿಯ ವಿರುದ್ಧ ಧ್ವನಿ ಎತ್ತುವಂತಿಲ್ಲ. ರಾಜಕೀಯ ಸ್ವಾರ್ಥಕ್ಕಾಗಿ ಸಂವಿಧಾನವನ್ನೇ ತಿರುಚುವ ಕುತಂತ್ರ ನಡೆಯುತ್ತಿದೆ ಎಂದು ದಕ್ಷಿಣ ಮಧ್ಯ ವಲಯ ವಿಮಾ ನೌಕರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕ್ಲೆಮೆಟ್ ಕ್ಸೇವಿಯರ್ ದಾಸ್ ತಿಳಿಸಿದ್ದಾರೆ. ಅವರು ವಿಮಾ ನೌಕರರ ಸಂಘದ ಉಡುಪಿ ವಿಭಾಗದ ವತಿಯಿಂದ ಬ್ರಹ್ಮಗಿರಿಯ ಲಯನ್ಸ್ ಭವನದ ಎನ್.ಎಂ.ಎಸ್. ವೇದಿಕೆಯಲ್ಲಿ ಶನಿವಾರ ನಡೆದ 60 ನೇ ವಿಭಾಗೀಯ ಸಮ್ಮೇಳನ ಹಾಗೂ 19 ನೇ ಮಹಿಳಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ಉದ್ಯಮಗಳ 30 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡುವ ಪ್ರಧಾನಿ ಮೋದಿಗೆ ರೈತರ ಸಾಲ ಮನ್ನಾಕ್ಕೆ ಹಣವಿಲ್ಲ. ಬ್ಯಾಂಕ್, ಸಾರ್ವಜನಿಕ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಕಾರ್ಮಿಕ ವರ್ಗ ಮೋದಿ ಆಳ್ವಿಕೆಯಿಂದ ಬೇಸತ್ತಿದ್ದು, ಜ. 8 ಮತ್ತು 9 ರಂದು ಕಾರ್ಮಿಕ ಸಂಘಟನೆಗಳು ರಾಷ್ಟ್ರವ್ಯಾಪ್ತಿ ಬಂದ್‍ಗೆ ಕರೆ ಕೊಟ್ಟಿವೆ ಎಂದರು.

ನೋಟ್ ಅಮಾನ್ಯ ಮಾಡಿರುವುದು ಈ ದೇಶದ ಆರ್ಥಿಕತೆಗೆ ಹೊಡೆತ ಕೊಟ್ಟಿದ್ದು, ಈ ಬಗ್ಗೆ ಹಿರಿಯ ಆರ್ಥಿಕ ತಜ್ಞರೇ ಅಭಿಪ್ರಾಯಿಸಿದ್ದಾರೆ. ಕೃಷಿ ನಷ್ಟದ ಕುರಿತು ಕೃಷಿ ಸಚಿವಾಲಯವೇ ಸಂಸದೀಯ ಸಮಿತಿಗೆ ವರದಿ ಸಲ್ಲಿಕೆ ಮಾಡಿದೆ. ದೇಶದ ಶೇ. 55 ರಷ್ಟು ಸಂಪತ್ತು ಶೇ. 1 ರಷ್ಟು ಮಂದಿ ಕೈಯಲ್ಲಿದ್ದು, ಶೇ. 90 ರಷ್ಟು ಮಂದಿ ಇನ್ನು ಕೂಡಾ ತಿಂಗಳಿಗೆ 10 ಸಾವಿರಕ್ಕಿಂತ ಕಡಿಮೆ ಹಣ ಪಡೆಯುತ್ತಿದ್ದಾರೆ. ಈ ಬಗ್ಗೆ ಚುನಾಯಿತ ಜನಪ್ರತಿನಿಗಳು ಸರಿದೂಗಿಸಲು ಯತ್ನಿಸಬೇಕೆಂದು ಆಗ್ರಹಿಸಿದರು. ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಜಿಲ್ಲಾ ಸಮಿತಿ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ವಿಮಾ ನೌಕರರ ಸಂಘದ ಉಡುಪಿ ವಿಭಾಗ ಮಾಜಿ ಪ್ರಧಾನಿ ಕಾರ್ಯದರ್ಶಿ ಎ.ಎಸ್. ಆಚಾರ್ಯ, ವಿಮಾ ನೌಕರರ ಸಂಘ ಉಡುಪಿ ವಿಭಾಗದ ಅಧ್ಯಕ್ಷ ಕೆ.ಆರ್. ಭಟ್, ವಿಮಾ ನೌಕರರ ಒಕ್ಕೂಟ ರಾಜ್ಯ ಸಂಚಾಲಕಿ ಎಚ್. ಆರ್. ಗಾಯತ್ರಿ, ಮಹಿಳಾ ಸಂಚಾಲಕಿ ಉಷಾಲತಾ ಶೆಟ್ಟಿ, ಉಪಾಧ್ಯಕ್ಷ ಮೊಹಮ್ಮದ್ ಮೆಹಬೂಬ್, ಕೆ. ವಿಶ್ವನಾಥ ಉಪಸ್ಥಿತರಿದ್ದರು

About the author

ಕನ್ನಡ ಟುಡೆ

Leave a Comment