ರಾಷ್ಟ್ರ

ಭ್ರಷ್ಟ ಅಧಿಕಾರಿಗಳಿಗೆ ಪಾಸ್‌ಪೋರ್ಟ್‌ ನೀಡುವುದು ಇಲ್ಲ:ಕೇಂದ್ರ ಸರ್ಕಾರ

ನವದೆಹಲಿ: ಸರ್ಕಾರಿ ಅಧಿಕಾರಿಗಳ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮಹತ್ವದ ಕ್ರಮಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರ, ಭಷ್ಟಾಚಾರಾ ಆರೋಪ ಎದುರಿಸುತ್ತಿರುವ ಅಧಿಕಾರಿಗಳಿಗೆ ಪಾಸ್ ಪೋರ್ಟ್ ನೀಡದಿರಲು ನಿರ್ಧರಿಸಿದೆ ಎನ್ನಲಾಗಿದೆ.

ಈ ಬಗ್ಗೆ ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಸಚಿವಾಲಯ ನಿಯಮಾವಳಿಯೊಂದನ್ನು ಅಂತಿಮಗೊಳಿಸಿದ್ದು ಇದರಲ್ಲಿ ಅಪರಾಧ ಪ್ರಕರಣ ಅಥವಾ ಭ್ರಷ್ಟಾಚಾರ ಪ್ರಕರಣ ಎದುರಿಸುತ್ತಿರುವ ಅಧಿಕಾರಿಗಳಿಗೆ ಇನ್ನು ಮುಂದೆ ಪಾಸ್‌ಪೋರ್ಟ್‌ ನೀಡದಿರುವ ಸಂಬಂಧ ಅಂತಿಮಗೊಳಿಸಿರುವ ಹೊಸ ನಿಯಮಾವಳಿಯಲ್ಲಿ ಸೇರಿಸಲಾಗಿದೆ. ತುರ್ತು ವೈದ್ಯಕೀಯ ಸನ್ನಿವೇಶದಲ್ಲಿ ವಿದೇಶಕ್ಕೆ ತೆರಳಬೇಕಾದ ಅನಿವಾರ್ಯ ಎದುರಾದಾಗ ಮಾತ್ರವೇ ವಿಶೇಷ ವಿನಾಯಿತಿ ನೀಡಲಾಗುತ್ತದೆ ಎಂದು ತಿಳಿದುಬಂದಿದೆ.

ಭ್ರಷ್ಟಾಚಾರ ಪ್ರಕರಣದಲ್ಲಿ ಸಿಕ್ಕಿಬಿದ್ದರೆ ತನಿಖೆ ನಡೆಯುತ್ತಿದ್ದರೆ ಅಥವಾ ಯಾವುದೇ ಸರ್ಕಾರಿ ಸಂಸ್ಥೆಯಿಂದ ಅಧಿಕಾರಿಯ ವಿರುದ್ಧ ಎಫ್ಐಆರ್ ದಾಖಲಾಗಿದ್ದರೆ ಮತ್ತು ಅಧಿಕಾರಿಯನ್ನು ಅಮಾನತಿನಲ್ಲಿರಿಸಿದ್ದರೆ ಪಾಸ್‌ಪೋರ್ಟ್‌ ನೀಡಿಕೆ ತಿರಸ್ಕರಿಸಲಾಗುತ್ತದೆ. ಅಲ್ಲದೆ ಅಪರಾಧ ಪ್ರಕರಣಗಳು ವಿಚಾರಣೆಯಲ್ಲಿದ್ದರೂ ಈ ನಿಯಮ ಅನ್ವಯವಾಗುತ್ತದೆ. ಕೇವಲ ಎಫ್ಐಆರ್ ದಾಖಲಾಗಿ ಚಾರ್ಜ್‌ಶೀಟ್‌ ದಾಖಲಾಗಿಲ್ಲದಿದ್ದರೆ ಅಂಥವರಿಗೆ ಪಾಸ್‌ ಪೋರ್ಟ್‌ ನಿರಾಕರಿಸುವಂತಿಲ್ಲ ಎನ್ನಲಾಗಿದೆ.

ಅಂತೆಯೇ ಎಫ್ಐಆರ್‌ ನ ವಿವರಣೆಯನ್ನು ಪಾಸ್‌ಪೋರ್ಟ್‌ ಕಚೇರಿಗೆ ನೀಡಲಾಗುತ್ತದೆ. ಆದರೆ ಅಂತಿಮ ನಿರ್ಧಾರ ಕೈಗೊಳ್ಳುವ ಅಧಿಕಾರ ಪಾಸ್‌ಪೋರ್ಟ್‌ ಕಚೇರಿಗೆ ಬಿಡಲಾಗುತ್ತದೆ. ಅಧಿಕಾರಿಯ ಸಂಬಂಧಿಕರು ಅಥವಾ ಸ್ವತಃ ಅಧಿಕಾರಿಯು ಆರೋಗ್ಯ ಸಮಸ್ಯೆ ಹೊಂದಿದ್ದು ವಿದೇಶಕ್ಕೆ ತೆರಳಬೇಕಿದ್ದರೆ ಆಗ ಪಾಸ್‌ಪೋರ್ಟ್‌ ನೀಡಲಾಗುತ್ತದೆ. ಎಂದು ಕೇಂದ್ರ ಸರ್ಕಾರ ನಿರ್ಧರಿಸಿದೆ.

About the author

ಕನ್ನಡ ಟುಡೆ

Leave a Comment