ರಾಷ್ಟ್ರ ಸುದ್ದಿ

ಕೇಂದ್ರ ಸರ್ಕಾರ ರಾಮ ಮಂದಿರಕ್ಕೆ ಕಾನೂನು ತಂದರೆ 2019 ರಲ್ಲಿ ಗೆಲುವು: ವಿಹೆಚ್ ಪಿ

ಇಂದೋರ್: ಕೇಂದ್ರ ಸರ್ಕಾರ ರಾಮ ಮಂದಿರ ನಿರ್ಮಾಣಕ್ಕೆ ಕಾನೂನು ತಂದರೆ 2019 ರಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದು ವಿಹೆಚ್ ಪಿ ನಾಯಕ ವಿಷ್ಣು ಸದಾಶಿವ ಕೊಕ್ಜೆ ಅಭಿಪ್ರಾಯಪಟ್ಟಿದ್ದಾರೆ. ಬಿಜೆಪಿ ನೇತೃತ್ವದ ಸರ್ಕಾರ ರಾಮ ಮಂದಿರ ನಿರ್ಮಾಣಕ್ಕಾಗಿ ಕಾನೂನು ಜಾರಿಗೆ ತಂದಿದ್ದೇ ಆದರೆ ಮುಂದಿನ ಚುನಾವಣೆಯಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬಂದೇ ಬರುತ್ತದೆ. ಆದರೆ ಒಂದು ವೇಳೆ ಕಾನೂನು ಜಾರಿಗೊಳಿಸಿದ್ದೇ ಆದಲ್ಲಿ, ಅದನ್ನು ಮತ್ತೊಬ್ಬರು ಕೋರ್ಟ್ ನಲ್ಲಿ ಪ್ರಶ್ನಿಸಬಹುದೆಂಬುದು ಕೇಂದ್ರ ಸರ್ಕಾರದ ಸದ್ಯದ ಯೋಚನೆಯಾಗಿರಬಹುದು ಎಂದು ಕೊಕ್ಜೆ ಹೇಳಿದ್ದಾರೆ. ಜ.29 ಕ್ಕೆ ನಿಗದಿಯಾಗಿದ್ದ ರಾಮಜನ್ಮಭೂಮಿ-ಬಾಬ್ರಿ ಭೂ ವಿವಾದ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮತ್ತೊಮ್ಮೆ ಮುಂದೂಡಿದೆ. ಈ ಬೆನ್ನಲ್ಲೇ ವಿಹೆಚ್ ಪಿ ಕಾನೂನು ಜಾರಿಗೊಳಿಸುವುದರ ಬಗ್ಗೆ ಮಾತನಾಡಿದೆ.

About the author

ಕನ್ನಡ ಟುಡೆ

Leave a Comment