ಸುದ್ದಿ

ಕೇಕ್‌ ತಿಂದು 11 ಮಂದಿ ಅಸ್ವಸ್ಥ; ಆಸ್ಪತ್ರೆಗೆ ದಾಖಲು

 ಮಂಡ್ಯ:  ಕೆ.ಆರ್‌.ಪೇಟೆ:  ಬೇಕರಿಯಿಂದ ತಂದಿದ್ದ ಕೇಕ್‌ ತಿಂದು  ಗರ್ಭಿಣಿ ಸೇರಿ 11 ಮಂದಿ  ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಗುರುವಾರ ರಾತ್ರಿ ನಡೆದಿದೆ.

ಗುರುವಾರ ಸಂಜೆ ಬಳಿಕ ಗ್ರಾಮದಲ್ಲಿ ಕೇಕ್‌ ತಿಂದಂತಹ ಮಕ್ಕಳು ಒಬ್ಬರಾದ ಬಳಿಕ ಒಬ್ಬರು ವಾಂತಿ ಮಾಡಿಕೊಂಡಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.  4 ತಿಂಗಳ ಗರ್ಭಿಣಿಯೊಬ್ಬರು ಅಸ್ವಸ್ಥಗೊಂಡಿದ್ದುಕೆಲವರನ್ನು ಕೆ.ಆರ್‌.ಪೇಟೆ ಆಸ್ಪತ್ರೆಗೆ ಇನ್ನು ಕೆಲವರನ್ನು  ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಕ್ರಮ ಕೈಗೊಂಡಿರುವ ಆರೋಗ್ಯ ಇಲಾಖೆ ಅಧಿಕಾರಿಗಳು ಬೇಕರಿಗೆ ದೌಡಾಯಿಸಿ ಕೇಕ್‌ ವಶಪಡಿಸಿಕೊಂಡಿದ್ದಾರೆ ಮಾತ್ರವಲ್ಲದೆ ಬೇಕರಿಗೆ ಬೀಗ ಜಡಿದಿದ್ದಾರೆ.

 

About the author

ಕನ್ನಡ ಟುಡೆ

Leave a Comment