ರಾಷ್ಟ್ರ ಸುದ್ದಿ

ಕೇಕ್ ಕತ್ತರಿಸಿ ರಾಷ್ಟ್ರೀಯ ಕಾಂಗ್ರೆಸ್ 133ನೇ ಸಂಸ್ಥಾಪನಾ ದಿನಾಚರಣೆ

ನವದೆಹಲಿ: ಇಂದು ಕಾಂಗ್ರೆಸ್ ಪಕ್ಷದ 133ನೇ ಸಂಸ್ಥಾಪನಾ ದಿನ. ಇದರ ಅಂಗವಾಗಿ  ಎಐಸಿಸಿ ಕೇಂದ್ರ ಕಚೇರಿಯಲ್ಲಿ  ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಕೇಕ್ ಕತ್ತರಿಸುವ ಮೂಲಕ ಪಕ್ಷದ ಸಂಸ್ಥಾಪನಾ ದಿನವನ್ನು ಆಚರಣೆ ಮಾಡಿದರು. ಡಿಸೆಂಬರ್ 28, 1885ರಲ್ಲಿ ಬ್ರಿಟಿಷ್ ನಾಗರಿಕ ಸೇವಾ ಅಧಿಕಾರಿ ಎ. ಓ. ಹ್ಯೂಮ್ ಅವರಿಂದ ಸ್ಥಾಪನೆಗೊಂಡಿದ್ದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ವಿಶ್ವದಲ್ಲಿಯೇ ಅತಿ ಹಳೆಯದಾದ ರಾಜಕೀಯ ಪಕ್ಷವಾಗಿದೆ. ಬ್ರಿಟಿಷ್ ಆಳ್ವಿಕೆ ಸಂದರ್ಭದಲ್ಲಿ ಆಡಳಿತ ನೀತಿಯ ಮೇಲೆ ಪ್ರಭಾವ ಬೀರುವ ನಿಟ್ಟಿನಲ್ಲಿ ಸ್ಥಾಪನೆಗೊಂಡ ಕಾಂಗ್ರೆಸ್  ಪಕ್ಷ ನಂತರ  ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿ ವಹಿಸಿತ್ತು. ಕಾಂಗ್ರೆಸ್ ಪಕ್ಷ ಸಂಸ್ಥಾಪನಾ ದಿನದ ಅಂಗವಾಗಿ ಎಐಸಿಸಿ  ಪ್ರಧಾನ ಕಚೇರಿಯಲ್ಲಿ ರಾಹುಲ್ ಗಾಂಧಿ ರಾಷ್ಟ್ರ ಧ್ವಜವನ್ನು ಆರೋಹಣ ಮಾಡಿದರು. ಸೋನಿಯಾಗಾಂಧಿ ಅತಿ ಹೆಚ್ಚು ಕಾಲ ಪಕ್ಷದ ಅಧ್ಯಕ್ಷರಾಗುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಪ್ರಮುಖವಾದ ಕೊಡುಗೆ ನೀಡಿದ್ದಾರೆ. ಈಗಲೂ ಕೂಡಾ  ಸೇವೆ ಮಾಡುತ್ತಿದ್ದಾರೆ. 1997ರಲ್ಲಿ ಪಕ್ಷದ ಪ್ರಾಥಮಿಕ ಸದಸ್ಯತ್ವ ಪಡೆದಿದ್ದ ಸೋನಿಯಾಗಾಂಧಿ 1998ರಲ್ಲಿ ಅಧ್ಯಕ್ಷರಾಗಿ ಚುನಾಯಿತರಾಗಿದ್ದರು.

About the author

ಕನ್ನಡ ಟುಡೆ

Leave a Comment