ಪರಿಸರ

ಕೇರಳದಲ್ಲಿ ಜಡಿಮಳೆ

ತಿರುವನಂಪುರ : ಕೇರಳದ ವಿವಿಧ ಭಾಗಗಳಲ್ಲಿ ಜಡಿಮಳೆಯಾಗುತ್ತಿದ್ದು ಇಂದು 74 ವರ್ಷ ಪ್ರಾಯದ ವ್ಯಕ್ತಿಯೋರ್ವರು ವಿದ್ಯುದಾಘಾತಕ್ಕೆ ಬಲಿಯಾಗಿದ್ದಾರೆ. ಈ ನಡುವೆ ಕೇರಳದ ಮೂರು ಅಣೆಕಟ್ಟುಗಳ ಶಟರ್‌ಗಳನ್ನು ತೆರೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಡ್ಯಾಮ್‌ಗಳೆಂದರೆ ತಿರುವನಂಪುರಂ ನೆಯ್ನಾರ್‌, ಅರುವಿಕ್ಕರ ಮತ್ತು ಪೆಪ್ಪಾರ. ಈ ಡ್ಯಾಮಗಳಲ್ಲಿನ ನೀರಿನ ಮಟ್ಟ ಹೆಚ್ಚುತ್ತಿರುವ ಕಾರಣಕ್ಕೆ ಶಟರ್‌ ತೆರೆಯಲಾಗಿದೆ ಎಂದು ರಾಜ್ಯದ ಪ್ರಕೋಪ ನಿಯಂತ್ರಣ ಕೊಠಡಿಯ ಅಧಿಕಾರಿಗಳು ತಿಳಿಸಿದ್ದಾರೆ.

About the author

ಕನ್ನಡ ಟುಡೆ

Leave a Comment